ಸಾರಾಂಶ
ಇಂಡೋನೇಷ್ಯಾದ ದ್ವೀಪವೊಂದರಲ್ಲಿ ಬುಧವಾರ ಜ್ವಾಲಾಮುಖಿಯೊಂದು ಸ್ಫೋಟಗೊಂಡಿದೆ. ಪರಿಣಾಮ ಪರ್ವತದ ಸುತ್ತಮುತ್ತಲು ಇರುವ 11,000 ಜನರನ್ನು ಕೂಡಲೇ ಸ್ಥಳಾಂತರ ಮಾಡಲು ಇಲ್ಲಿನ ಸರ್ಕಾರ ಆದೇಶಿಸಿದೆ.
ಜಕಾರ್ತ: ಇಂಡೋನೇಷ್ಯಾದ ದ್ವೀಪವೊಂದರಲ್ಲಿ ಬುಧವಾರ ಜ್ವಾಲಾಮುಖಿಯೊಂದು ಸ್ಫೋಟಗೊಂಡಿದೆ. ಪರಿಣಾಮ ಪರ್ವತದ ಸುತ್ತಮುತ್ತಲು ಇರುವ 11,000 ಜನರನ್ನು ಕೂಡಲೇ ಸ್ಥಳಾಂತರ ಮಾಡಲು ಇಲ್ಲಿನ ಸರ್ಕಾರ ಆದೇಶಿಸಿದೆ.
ಇಂಡೋನೇಷ್ಯಾ ರಾಜಧಾನಿ ಜಕಾರ್ತದಿಂದ 00 ಕಿಲೋಮೀಟರ್ ದೂರದಲ್ಲಿರುವ ಸುಲವೇಸಿ ದ್ವೇಪದ ರುವಾಂಗ್ ಪರ್ವತದಲ್ಲಿ ಜ್ವಾಲಮುಖಿ ಸ್ಫೋಟಗೊಂಡಿದೆ. ಈ ಜ್ವಾಲಾಮುಖಿ ಒಂದೇ ದಿನದಲ್ಲಿ ಐದು ಬಾರಿ ಜೋರಾಗಿ ಚಿಮ್ಮಿದೆ. ಪರ್ವತಕ್ಕೆ ಸಮುದ್ರ ಹೊಂದಿಕೊಂಡಿರುವ ಕಾರಣ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಆಡಳಿತ ಜೋರಾದ ಎಚ್ಚರಿಕೆ ನೀಡಿದೆ. ಸಮುದ್ರದ ಉತ್ತರ ಬದಿಯಲ್ಲಿ ತಗುಲಂಡಂಗ್ ದ್ವೀಪದಲ್ಲಿರುವ 11,000 ಜನರನ್ನು ಸ್ಥಳಾಂತರ ಮಾಡುವಂತೆ ಜನರಿಗೆ ಪರ್ವತದಿಂದ 6 ಕಿ.ಮೀ.ದೂರದಲ್ಲಿರುವಂತೆ ಎಚ್ಚರಿಕೆ ನೀಡಿದೆ.2018ರಲ್ಲಿ ಅನಾಕ್ ಕ್ರಕತಾವ್ ಜ್ವಾಲಾಮುಖಿ ಸ್ಫೋಟದಿಂದಾಗಿ ಸುನಾಮಿ ಎದ್ದು, 430 ಮಂದಿ ಸಾವನ್ನಪ್ಪಿದ್ದರು.
;Resize=(128,128))
;Resize=(128,128))
;Resize=(128,128))