ಅಮೆರಿಕ- ಚೀನಾ ನಡುವೆ ವ್ಯಾಪಾರ ಸಂಬಂಧ ಬಿಕ್ಕಟ್ಟು ತಾರಕಕ್ಕೆ ಏರಿರುವ ಹೊತ್ತಿನಲ್ಲೇ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿರುದ್ಧ ಕ್ಷಿಪ್ರಕ್ರಾಂತಿಗೆ ಯತ್ನ ನಡೆಸಿದ್ದರು ಎನ್ನಲಾದ ಅವರ ಬಲಗೈ ಬಂಟ, ಜನರಲ್ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದೆ.
ಬೀಜಿಂಗ್: ಅಮೆರಿಕ- ಚೀನಾ ನಡುವೆ ವ್ಯಾಪಾರ ಸಂಬಂಧ ಬಿಕ್ಕಟ್ಟು ತಾರಕಕ್ಕೆ ಏರಿರುವ ಹೊತ್ತಿನಲ್ಲೇ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿರುದ್ಧ ಕ್ಷಿಪ್ರಕ್ರಾಂತಿಗೆ ಯತ್ನ ನಡೆಸಿದ್ದರು ಎನ್ನಲಾದ ಅವರ ಬಲಗೈ ಬಂಟ, ಜನರಲ್ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದೆ.
ಕೇಂದ್ರ ಮಿಲಿಟರಿ ಆಯೋಗದ ಉಪಾಧ್ಯಕ್ಷ
ಜಿನ್‌ಪಿಂಗ್ ಅವರ ನೇತೃತ್ವದ ಕೇಂದ್ರ ಮಿಲಿಟರಿ ಆಯೋಗದ ಉಪಾಧ್ಯಕ್ಷರಾಗಿ ಜಾಂಗ್ ಇದ್ದರು. ಇದರರ್ಥ ಅವರು ಕ್ಸಿ ಜಿನ್‌ಪಿಂಗ್ ನಂತರ ಅತ್ಯಂತ ಶಕ್ತಿಶಾಲಿ ಮಿಲಿಟರಿ ಅಧಿಕಾರಿಯಾಗಿದ್ದರು.
ಕ್ಸಿ ಹಾಗೂ ಜಾಂಗ್ ನಡುವೆ ಭಿನ್ನಾಭಿಪ್ರಾಯ
ಆದರೆ, ‘ತೈವಾನ್ ಅನ್ನು ಮರುವಶ ಮಾಡಿಕೊಳ್ಳುವಲ್ಲಿ ಕ್ಸಿ ಹಾಗೂ ಜಾಂಗ್ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಭ್ರಷ್ಟಾಚಾರದ ಆರೋಪ ಕೂಡ ಅವರ ಮೇಲೆ ಕೇಳಿಬಂದಿತ್ತು. ದೇಶದ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಮೆರಿಕಕ್ಕೆ ಸೋರಿಕೆ ಮಾಡಿದ ಆರೋಪ ಅವರ ಮೇಲಿತ್ತು. ಇದರ ನಡುವೆ ಕ್ಸಿ ವಿರುದ್ಧವೇ ದಂಗೆ ಯತ್ನವನ್ನು ಅವರು ನಡೆಸುತ್ತಿದ್ದರು. ವಿಷಯ ತಿಳಿದೊಡನೆಯೇ ಅವರನ್ನು ಬಂಧಿಸಲಾಗಿದೆ’ ಎಂದು ಮಾಧ್ಯಮ ವರದಿಗಳು ಹೇಳಿವೆ.
ಆದರೆ ಅಧಿಕೃತ ಹೇಳಿಕೆಯಲ್ಲಿ ಚೀನಾ ರಕ್ಷಣಾ ಸಚಿವಾಲಯ, ದಂಗೆ ಸೇರಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿಲ್ಲ. ‘ಗಂಭೀರ ಅಶಿಸ್ತು ಮತ್ತು ಕಾನೂನು ಉಲ್ಲಂಘನೆಗಾಗಿ ಅವರ ಮೇಲೆ ಕ್ರಮ ಜರುಗಿಸಲಾಗಿದೆ’ ಎಂದಷ್ಟೇ ಹೇಳಿದೆ.
ಚೀನಾ ಸೇನೆಯ ಮೇಲೆ ಸೆಂಟ್ರಲ್ ಮಿಲಿಟರಿ ಕಮಿಷನ್ ಎಂಬ ವ್ಯವಸ್ಥೆ ಪೂರ್ಣ ಹಿಡಿತ ಹೊಂದಿದೆ. ಇದರ 7 ಸದಸ್ಯರ ಪೈಕಿ ನಾಲ್ವರನ್ನು ಇತ್ತೀಚೆಗೆ ಭ್ರಷ್ಟಾಚಾರದ ಆರೋಪದ ಮೇಲೆ ಕೈಬಿಡಲಾಗಿದೆ. ಅದರ ಬೆನ್ನಲ್ಲೇ ಇದೀಗ ಜಾಂಗ್ ಯೂಕ್ಸಿಯಾ ಅವರನ್ನು ಹುದ್ದೆಯಿಂದ ವಜಾ ಮಾಡಿ ಬಂಧಿಸಲಾಗಿದೆ.
ತೈವಾನ್ ವಶ ಸಂಬಂಧ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಜನರಲ್ ಜಾಂಗ್ ನಡುವೆ ಭಿನ್ನಾಭಿಪ್ರಾಯದ ವದಂತಿ
ಇದೇ ಕಾರಣಕ್ಕೆ ಇತ್ತೀಚೆಗೆ ಜಿನ್‌ಪಿಂಗ್ ವಜಾಕ್ಕೆ ಜಾಂಗ್ ಯತ್ನಿಸಿದ್ದದ ಆರೋಪ. ಅದರ ಬೆನ್ನಲ್ಲೇ ವಜಾ. ಅರೆಸ್ಟ್
ಆದರೆ ವಜಾಕ್ಕೆ ‘ಗಂಭೀರ ಅಶಿಸ್ತು ಮತ್ತು ಕಾನೂನು ಉಲ್ಲಂಘನೆಗಾಗಿ ಕ್ರಮ ಎಂಬ ಮಾಹಿತಿ ನೀಡಿರುವ ಸರ್ಕಾರ
ಈ ವಜಾ ಬಳಿಕ ಚೀನಾ ಸೇನೆ ಮೇಲೆ ಹಿಡಿತ ಹೊಂದಿರುವ ಸಿಎಂಸಿಯಲ್ಲಿ ಜಿನ್‌ಪಿಂಗ್ ಸೇರಿ ಇಬ್ಬರು ಸದಸ್ಯರು ಬಾಕಿ