ಇರಾನಿ ಸರ್ವಾಧಿಕಾರಿ ಆಯತೊಲ್ಲಾ ಖಮೇನಿ ಸರ್ಕಾರದ ವಿರುದ್ಧದ ಜನರ ದಂಗೆ ತೀವ್ರಗೊಳ್ಳುತ್ತಿರುವ ನಡುವೆಯೇ, ಖಮೇನಿ ವಿರೋಧಿ ಅಮೆರಿಕವು ಇರಾನ್‌ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ ಸಾಧ್ಯತೆ ಕುರಿತು ಪರಿಶೀಲನೆ ಆರಂಭಿಸಿದೆ ಎನ್ನಲಾಗುತ್ತಿದೆ.

- ವೆನಿಜುವೆಲಾ ಆಯ್ತ ಈಗ ಪರ್ಷಿಯಾ ಮೇಲೆ ಕಣ್ಣು

---- ಇರಾನ್‌ ಹಿಂದೆಂದಿಗಿಂತ ಹೆಚ್ಚಾಗಿ ಸ್ವಾತಂತ್ರ್ಯಕ್ಕೆ ಹಂಬಲಿಸುತ್ತಿದೆ- ಹೋರಾಟಕ್ಕೆ ನೆರವಾಗಲು ಸಿದ್ಧ: ದಾಳಿಯ ಬಗ್ಗೆ ಟ್ರಂಪ್‌ ಸುಳಿವು- ಇರಾನ್‌ ಸುತ್ತಮತ್ತಲೂ ಹೆಚ್ಚಾದ ಅಮೆರಿಕ ಸೇನೆಯ ಜಮಾವಣೆ

---

ಸೈದ್ಧಾಂತಿಕ, ವ್ಯೂಹಾತ್ಮಕ ಕಾರಣಕ್ಕೆ ಎರಡೂ ದೇಶಗಳ ನಡುವೆ ವೈರತ್ವ

ಜೊತೆಗೆ ಇರಾನ್‌ನಲ್ಲಿ ಅಪಾರ ತೈಲ ಸಂಪತ್ತಿನ ಮೇಲೂ ಅಮೆರಿಕದ ಕಣ್ಣಿದೆ

ಪಶ್ಚಿಮ ಏಷ್ಯಾ ವಲಯದಲ್ಲಿನ ಅಧಿಪತ್ಯಕ್ಕಾಗಿ ಎರಡೂ ದೇಶಗಳ ಸಮರವಿದೆ

ಈ ನಡುವೆ ಇತ್ತೀಚಿನ ದಂಗೆ ಹಿಂದೆ ಅಮೆರಿಕವಿದೆ ಎಂದು ಇರಾನ್‌ನ ದೂರು

ಪ್ರತಿಭಟನೆ ಹತ್ತಿಕ್ಕಲು ಇರಾನ್‌ನಿಂದ ನರಮೇಧ ಎಂದು ಅಮೆರಿಕ ಆರೋಪ

ಈ ಹಿನ್ನೆಲೆಯಲ್ಲಿ ಇರಾನ್‌ ಮೇಲೆ ದಾಳಿ ನಡೆಸಲು ಟ್ರಂಪ್‌ ಸರ್ಕಾರದ ಚಿಂತನೆ==

ಇರಾನ್‌ ಪ್ರತಿಭಟನೆಗೆ

ಇಸ್ರೇಲ್‌ನ ಬೆಂಬಲ!

ದಂಗೆಕೋರರಿಗೆ ನನ್ನ ಬೆಂಬಲ: ನೆತನ್ಯಾಹು

ಜೆರುಸಲೆಂ: ಇರಾನ್‌ನಲ್ಲಿ ಸಂಘರ್ಷ ಹೆಚ್ಚಾದ ಬೆನ್ನಲ್ಲೇ, ‘ಇರಾನ್‌ ದಂಗೆಕೋರರಿಗೆ ನನ್ನ ಬೆಂಬಲವಿದೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಬೆಂಬಲಿಸಿದ್ದಾರೆ. ಜೊತೆಗೆ ಸಂಭಾವ್ಯ ಇರಾನ್‌ ದಾಳಿ ತಡೆಗೆ ದೇಶದಲ್ಲಿ ಕಟ್ಟೆಚ್ಚರ ಸಾರಿದ್ದಾರೆ. ಇದು ಈ ಪ್ರದೇಶದಲ್ಲಿ ಯುದ್ಧದ ವಾತಾವರಣ ಸೃಷ್ಟಿಸಿದೆ.

==

ಅಮೆರಿಕ ದಾಳಿ ಮಾಡಿದ್ರೆ

ಇಸ್ರೇಲ್‌ ಮೇಲೆ ದಾಳಿ

ಅಮೆರಿಕಕ್ಕೆ ಇರಾನ್‌ ಸ್ಪೀಕರ್‌ ಬಘೇರ್‌ ಎಚ್ಚರಿಕೆ

ಟೆಹ್ರಾನ್‌; ಒಂದು ವೇಳೆ ‘ಅಮೆರಿಕವೇನಾದರೂ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಸುಮ್ಮನಿರಲ್ಲ, ಇಸ್ರೇಲ್‌ ಅನ್ನು ಗುರಿಯಾಗಿಸಿ ದಾಳಿ ನಡೆಸಲಿದ್ದೇವೆ. ಅಮೆರಿಕದ ಹಡಗು, ಮಿಲಿಟರಿ ನೆಲೆಗಳೂ ನಮ್ಮ ದಾಳಿಯ ಗುರಿ ಆಗಲಿವೆ ಎಂದು ಇರಾನ್‌ನ ಸ್ಪೀಕರ್‌ ಮೊಹಮ್ಮದ್‌ ಬಘೇರ್‌ ಗಾಲಿಬಾಫ್‌ ಗುಡುಗಿದ್ದಾರೆ.

==

ಟೆಹ್ರಾನ್‌/ವಾಷಿಂಗ್ಟನ್: ಇರಾನಿ ಸರ್ವಾಧಿಕಾರಿ ಆಯತೊಲ್ಲಾ ಖಮೇನಿ ಸರ್ಕಾರದ ವಿರುದ್ಧದ ಜನರ ದಂಗೆ ತೀವ್ರಗೊಳ್ಳುತ್ತಿರುವ ನಡುವೆಯೇ, ಖಮೇನಿ ವಿರೋಧಿ ಅಮೆರಿಕವು ಇರಾನ್‌ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ ಸಾಧ್ಯತೆ ಕುರಿತು ಪರಿಶೀಲನೆ ಆರಂಭಿಸಿದೆ ಎನ್ನಲಾಗುತ್ತಿದೆ. ಇಂಥ ಸುದ್ದಿಗಳಿಗೆ ಪೂರಕ ಎನ್ನುವಂತೆ ಅಮೆರಿಕವು ಇರಾನ್‌ ಸುತ್ತ ತನ್ನ ಪಡೆಗಳ ಜಮಾವಣೆ ಹೆಚ್ಚಿಸಿದೆ ಹಾಗೂ ಸ್ನೇಹಿತ ದೇಶ ಇಸ್ರೇಲ್‌ ಜತೆ ಮಾತುಕತೆ ನಡೆಸಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಇದಕ್ಕೆ ಇರಾನ್‌ ಕೂಡ ತಿರುಗೇಟು ನೀಡಲು ರೆಡಿ ಎಂದಿದ್ದು ಅಮೆರಿಕ ಪಡೆಗಳಲ್ಲದೆ ಇಸ್ರೇಲ್‌ ಮೇಲೂ ಪ್ರತಿದಾಳಿಯ ಬೆದರಿಕೆ ಹಾಕಿದೆ,

ಇದರ ಬೆನ್ನಲ್ಲೇ, ‘ಇರಾನ್‌ ದಂಗೆಕೋರರಿಗೆ ನನ್ನ ಬೆಂಬಲವಿದೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಬೆಂಬಲಿಸಿದ್ದಾರೆ ಹಾಗೂ ಸಂಭಾವ್ಯ ಇರಾನ್‌ ದಾಳಿ ತಡೆಗೆ ಕಟ್ಟೆಚ್ಚರ ಸಾರಿದ್ದಾರೆ. ಇದು ಈ ಪ್ರದೇಶದಲ್ಲಿ ಯುದ್ಧದ ವಾತಾವರಣ ಸೃಷ್ಟಿಸಿದೆ.

ಟ್ರಂಪ್‌ ಹೇಳಿದ್ದೇನು?:

ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್. ‘ಇರಾನ್‌ ಹಿಂದೆಂದಿಗಿಂತಲೂ ಹೆಚ್ಚಾಗಿ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದೆ. ಅಮೆರಿಕವು ನೆರವು ನೀಡಲು ಸಿದ್ಧವಿದೆ’ ಎಂದು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್‌ ಸೋಷಲ್‌ನಲ್ಲಿ ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಮಿಲಿಟರಿ ಕಾರ್ಯಾಚರಣೆಗಳ ಸಾಧ್ಯಾಸಾಧ್ಯತೆಗಳ ಕುರಿತು ವಿವರಣೆ ನೀಡಲಾಗಿದೆ.

ಇನ್ನು, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಅಮೆರಿಕವು ತನ್ನ ಸೇನಾ ನಿಯೋಜನೆಯನ್ನೂ ಹೆಚ್ಚಿಸಿದೆ ಎಂದು ಮಾಜಿ ಸೇನಾ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಇದು ಈ ಹಿಂದೆ ಪರ್ಷಿಯಾ ಎಂದು ಕರೆಸಿಕೊಳ್ಳುತ್ತಿದ್ದ ಇರಾನ್‌ ಮೇಲೆ ಅಮೆರಿಕದ ದಾಳಿ ಸಾಧ್ಯತೆಯನ್ನು ಹೆಚ್ಚಿಸಿದೆ.

ಆದರೆ, ‘ಅಮೆರಿಕವೇನಾದರೂ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಸುಮ್ಮನಿರಲ್ಲ, ಇಸ್ರೇಲ್‌ ಅನ್ನು ಗುರಿಯಾಗಿಸಿ ದಾಳಿ ನಡೆಸಲಿದ್ದೇವೆ. ಅಮೆರಿಕದ ಹಡಗು, ಮಿಲಿಟರಿ ನೆಲೆಗಳೂ ನಮ್ಮ ದಾಳಿಯ ಗುರಿ ಆಗಲಿವೆ ಎಂದು ಇರಾನ್‌ನ ಸ್ಪೀಕರ್‌ ಮೊಹಮ್ಮದ್‌ ಬಘೇರ್‌ ಗಾಲಿಬಾಫ್‌ ಗುಡುಗಿದ್ದಾರೆ.

ಇಸ್ರೇಲ್‌ನಲ್ಲಿ ಹೈ ಅಲರ್ಟ್‌:

‘ಅಮೆರಿಕವೇನಾದರೂ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಅಮೆರಿಕ ಮಿತ್ರ ಇಸ್ರೇಲ್‌ ಮೇಲೆ ದಾಳಿ ನಡೆಸಲಿದ್ದೇವೆ’ ಎಂದು ಇರಾನ್‌ ಹೇಳಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ಹೈಅಲರ್ಟ್‌ ಸಾರಲಾಗಿದೆ. ಸಂಭಾವ್ಯ ಅಮೆರಿಕದ ದಾಳಿ ಬಳಿಕ ಎದುರಾಗಬಹುದಾದ ಭದ್ರತಾ ಬೆದರಿಕೆಗಳನ್ನು ಎದುರಿಸಲು ಈಗಾಗಲೇ ಇಸ್ರೇಲ್‌ ಸಿದ್ಧತೆ ಆರಂಭಿಸಿದೆ.

ಈ ಬಗ್ಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಅಮೆರಿಕ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಅವರು ದೂರವಾಣಿ ಕರೆ ಮೂಲಕ ಇರಾನ್‌ನಲ್ಲಿ ಅಮೆರಿಕದ ಮಧ್ಯಪ್ರವೇಶ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿದೇಶಿ ಗುಪ್ತಚರನ ಬಂಧನ?:

ದೇಶದೊಳಗೆ ನಡೆಯುತ್ತಿರುವ ದಂಗೆ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂದು ಆರೋಪಿಸುತ್ತಲೇ ಬಂದಿರುವ ಇರಾನ್‌ ಸರ್ಕಾರ ಇದೀಗ, ವಿದೇಶಿ ಗೂಢಚಾರಿಯೊಬ್ಬನನ್ನು ಬಂಧಿಸಿದ್ದಾಗಿ ತಿಳಿಸಿದೆ. ಈ ಮೂಲಕ ದಂಗೆಯ ಹಿಂದಿನ ವಿದೇಶಿ ಕೈವಾಡ ಬಯಲಿಗೆಳೆಯುವುದಾಗಿ ತಿಳಿಸಿದೆ.

===ಡೀಲ್‌ ಮಾಡಿಕೊಳ್ಳದೇ ಇದ್ರೆ, ಗಂಭೀರ ಪರಿಣಾಮ: ಕ್ಯೂಬಾಗೆ ಟ್ರಂಪ್‌ ಧಮಕಿ- ಮಾದಕ ವಸ್ತು ಜಾಲ ನಿಲ್ಲಿಸದಿದ್ದರೆ ತೈಲ ಪೂರೈಕೆ ಕಡಿತದ ಎಚ್ಚರಿಕೆ

- ಆಡಳಿತ ವಶದ ಬಗ್ಗೆ ಮತ್ತೆ ಅಮೆರಿಕದ ಅಧ್ಯಕ್ಷ ಗೂಢಾರ್ಥದ ಹೇಳಿಕೆ

ಕ್ಯೂಬಾ ಮೇಲೇಕೆ ಟ್ರಂಪ್‌ಗೆ ಸಿಟ್ಟುವೆನಿಜುವೆಲಾದಿಂದ ತೈಲ ಖರೀದಿ ಬದಲಿಗೆ ಕ್ಯೂಬಾ ಆ ದೇಶಕ್ಕೆ ಸೇನಾ ನೆರವು ನೀಡುತ್ತೆ

ಕ್ಯೂಬಾ, ಡ್ರಗ್ಸ್‌ ಉತ್ಪಾದನೆ, ಮಾರಾಟದ ಅತಿದೊಡ್ಡ ಜಾಲ ಎಂದು ಅಮೆರಿಕ ಆಕ್ಷೇಪಅಮೆರಿಕಕ್ಕೆ ಪೂರೈಕೆಯಾಗುವ ಡ್ರಗ್ಸ್‌ನಲ್ಲಿ ಕ್ಯೂಬಾ ಪಾಲಿದೆ ಎಂಬುದು ಟ್ರಂಪ್‌ ಆರೋಪ

ಹೀಗಾಗಿ ಹಾಲಿ ಸರ್ಕಾರ ಕೆಡವಿದರೆ ಡ್ರಗ್ಸ್‌ ಜಾಲಕ್ಕೆ ಕಡಿವಾಣ ಹಾಕಬಹುದೆಂಬ ಪ್ಲ್ಯಾನ್‌ವಾಷಿಂಗ್ಟನ್‌: ವೆನಿಜುವೆಲಾ ದಾಳಿಯ 2 ದಿನಗಳ ಬಳಿಕ ಕ್ಯೂಬಾ, ಮೆಕ್ಸಿಕೋ, ಕೊಲಂಬಿಯಾ ಮೇಲೆ ದಾಳಿ ಮಾತುಗಳನ್ನು ಆಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೆ ಅಂಥದ್ದೇ ಎಚ್ಚರಿಕೆ ನೀಡಿದ್ದಾರೆ. ‘ನಮ್ಮ ಜತೆ ಒಪ್ಪಂದ ಮಾಡಿಕೊಳ್ಳಿ. ಇಲ್ಲದಿದ್ದರೆ ಅನಿರ್ದಿಷ್ಟವಾದ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಹವಾನಾಗೆ (ಕ್ಯೂಬಾ ರಾಜಧಾನಿ) ವೆನಿಜುವೆಲಾದ ತೈಲ ಮತ್ತು ಹಣದ ಹರಿವು ಕೂಡ ನಿಲ್ಲುತ್ತದೆ. ತುಂಬಾ ತಡವಾಗುವ ಮೊದಲು ಅವರು ಒಪ್ಪಂದ ಮಾಡಿಕೊಳ್ಳಬೇಕೆಂದು ನಾನು ಬಲವಾಗಿ ಸೂಚಿಸುತ್ತೇನೆ’ ಎಂದು ಭಾನುವಾರ ಎಚ್ಚರಿಸಿದ್ದಾರೆ.ಇದೇ ವೇಳೆ, ‘ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಕ್ಯೂಬಾ ಅಧ್ಯಕ್ಷ ?’ ಎಂಬ ಸೋಷಿಯಲ್‌ ಮೀಡಿಯಾ ಪ್ರಶ್ನೆಗೆ ಅವರು ಉತ್ತರಿಸಿ, ‘ಇದು ಉತ್ತಮ ಸಲಹೆ’ ಎಂದಿದ್ದಾರೆ. ಅವರ ಈ ಉತ್ತರ ಸಂಚಲನ ಮೂಡಿಸಿದೆ. ಫಿಡೆಲ್‌ ಕ್ಯಾಸ್ಟ್ರೋ ಆಡಳಿತದ ವೇಳೆ ಅಮೆರಿಕ ವಿರೋಧಿ ಆಗಿದ್ದ ಕ್ಯೂಬಾಗೆ ಈಗ ಮೈಕೆಲ್‌ ಡಯಾಜ್‌ ಅಧ್ಯಕ್ಷರಾಗಿದ್ದಾರೆ.

ಇತ್ತೀಚೆಗೆ ಮೂರು ದೇಶಗಳ ವಿರುದ್ಧ ಹರಿಹಾಯ್ದಿದ್ದ ಟ್ರಂಪ್‌, ಮೆಕ್ಸಿಕೋ, ಕ್ಯೂಬಾ ಮತ್ತು ಕೊಲಂಬಿಯಾ ದೇಶಗಳಲ್ಲಿ ಆಡಳಿತದಲ್ಲಿರುವ ಸರ್ಕಾರಗಳು ಅಮೆರಿಕಕ್ಕೆ ಡ್ರಗ್ಸ್‌ ಪೂರೈಕೆ ಮಾಡುವ ಮೂಲಕ ನಮ್ಮ ಜನರ ಬದುಕು ಹಾಳು ಮಾಡುತ್ತಿವೆ. ಹೀಗಾಗಿ ವೆನಿಜುವೆಲಾ ರೀತಿಯಲ್ಲೇ ಈ ದೇಶಗಳ ಮೇಲೂ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಎಚ್ಚರಿಸಿದ್ದರು. ಜೊತೆಗೆ, ಕ್ಯೂಬಾದ ಪರಿಸ್ಥಿತಿಯೂ ಚೆನ್ನಾಗಿಲ್ಲ. ಅಲ್ಲಿನ ಜನ ಹಲವು ವರ್ಷಗಳಿಂದ ಸಂಕಷ್ಟದಲ್ಲಿದ್ದಾರೆ. ಕ್ಯೂಬಾ ಒಂದು ವಿಫಲ ರಾಷ್ಟ್ರ. ನಾವು ಕ್ಯೂಬಾದ ಜನರಿಗೆ ನೆರವಾಗಲು ಬಯಸಿದ್ದೇವೆ’ ಎಂದು ಟ್ರಂಪ್‌ ಮಾರ್ಮಿಕವಾಗಿ ಹೇಳಿದ್ದರು.ಕ್ಯೂಬಾಗೆ ಹೊಡೆತ ಹೇಗೆ?:

ಕ್ಯೂಬಾ ತೈಲಕ್ಕೆ ವೆನಿಜುವೆಲಾನ್ನೇ ಆಧರಿಸಿದೆ. ಇದಕ್ಕೆ ಪ್ರತಿಯಾಗಿ ಅದು ವೆನಿಜುವೆಲಾಕ್ಕೆ ಸೇನಾ ನೆರವು ನೀಡುತ್ತಿತ್ತು. ಮತ್ತೊಂದೆಡೆ ಕ್ಯೂಬಾದ ಆರ್ಥಿಕ ಸ್ಥಿತಿ ಸರಿಯಿಲ್ಲ. ಕ್ಯೂಬಾಗೆ ವೆನೆಜುವೆಲಾದ ತೈಲ ನಿರ್ಬಂಧಿಸಿದರೆ ಭೀಕರವಾಗಿ ಪರಿಣಮಿಸಲಿದೆ. ಕಳೆದ ವರ್ಷದ ಜನವರಿ ಮತ್ತು ನವೆಂಬರ್ ನಡುವೆ, ವೆನಿಜುವೆಲಾದಿಂದ ಮಾಸಿಕ 27 ಸಾವಿರ ಬ್ಯಾರೆಲ್‌ ತೈಲ ಕ್ಯೂಬಾಗೆ ಹೋಗಿದೆ. ಕ್ಯೂಬಾದ ಶೇ.50ರಷ್ಟು ತೈಲ ಬೇಡಿಕೆಯನ್ನು ವೆನಿಜುವೆಲಾ ನೀಗಿಸುತ್ತದೆ.