೨೯ನೇ ಸ್ಥಾನಕ್ಕೆ ಕುಸಿದ ವಿಜಯಪುರ ಜಿಲ್ಲೆ
Apr 09 2025, 12:47 AM ISTಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಕೇವಲ ಶೇ.೫೮.೮೧ ರಷ್ಟು ಮಾತ್ರ ಫಲಿತಾಂಶ ಬಂದಿದ್ದು, ೨೯ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳುವಂತಾಗಿದೆ. ಪ್ರಸಕ್ತ ವರ್ಷದಲ್ಲಿ ಪರೀಕ್ಷೆಗೆ ಹಾಜರಾದ ೩೧,೬೧೩ ವಿದ್ಯಾರ್ಥಿಗಳ ಪೈಕಿ ೧೮, ೫೯೧ ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಪರೀಕ್ಷೆಗೆ ಹಾಜರಾದ ೨೯,೨೭೪ ವಿದ್ಯಾರ್ಥಿಗಳ ಪೈಕಿ ೨೭,೭೭೯ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆಯ ಫಲಿತಾಂಶ ಶೇ.೯೪.೮೯ ರಷ್ಟು ದಾಖಲಾಗಿ ಹೊಸ ದಾಖಲೆ ಸೃಷ್ಟಿಯಾಗಿತ್ತು.