ಮನ್ಮುಲ್ ಚುನಾವಣೆ: ಎರಡು ನಿರ್ದೇಶಕ ಸ್ಥಾನಗಳಿಗೆ ನಾಲ್ವರ ಪೈಪೋಟಿ..!
Jan 31 2025, 12:46 AM ISTಮನ್ಮುಲ್ ಚುನಾವಣೆಯ ಅಖಾಡ ರಂಗೇರಿದ್ದು, ಕೆ.ಆರ್.ಪೇಟೆ ತಾಲೂಕಿನ ಎರಡು ನಿರ್ದೇಶಕ ಸ್ಥಾನಗಳಿಗೆ ಬಿರುಸಿನ ಪೈಪೋಟಿ ನಡೆಯುತ್ತಿದೆ. ತಾಲೂಕಿನಿಂದ ಎರಡು ಸ್ಥಾನಗಳಿಗೆ ಹಾಲಿ ನಿರ್ದೇಶಕ ಹಾಗೂ ಶಾಸಕ ಎಚ್.ಟಿ.ಮಂಜು, ನಾಟನಹಳ್ಳಿ ಬೋರ್ವೆಲ್ ಮಹೇಶ್, ಹಾಲಿ ನಿರ್ದೇಶಕ ಡಾಲು ರವಿ ಮತ್ತು ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಸೇರಿ ಒಟ್ಟು ನಾಲ್ವರು ಕಣದಲ್ಲಿದ್ದಾರೆ.