ರಸ್ತೆ ನಿರ್ಮಿಸದಿದ್ದರೆ ವಿಮಾನ ನಿಲ್ದಾಣದ ಕಾಂಪೌಂಡ್ ನೆಲಸಮ

Oct 29 2025, 01:15 AM IST
ಉದ್ದೇಶಿತ ವಿಮಾನ ನಿಲ್ದಾಣದ ಸುತ್ತ ನಿರ್ಮಿಸಲಾಗಿರುವ ಕಾಂಪೌಂಡ್ ಹೊರಗೆ ಕನಿಷ್ಠ ೩೦ ಅಡಿ ರಸ್ತೆ ನಿರ್ಮಿಸಿಕೊಡಲು ಕ್ರಮಕೈಗೊಳ್ಳಬೇಕು. ೧೫ ದಿನಗಳ ಒಳಗೆ ರಸ್ತೆ ನಿರ್ಮಿಸದಿದ್ದರೇ ಹಳ್ಳಿ ಜನರು ಎಲ್ಲಾ ಸೇರಿ ಕಾಂಪೌಂಡ್ ಬೀಳಿಸುವುದು ಅನಿವಾರ್ಯವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಆರ್‌.ಪಿ. ವೆಂಕಟೇಶ್ ಮೂರ್ತಿ ಎಚ್ಚರಿಸಿದರು. ಸರ್ಕಾರ ನೀಡಿದ ಜಾಗದ ಸುತ್ತ ಎತ್ತರದ ಗೋಡೆ ಮತ್ತು ಮುಳ್ಳಿನ ತಂತಿಯ ಸರಪಳಿಯು ನಿರ್ಮಿಸಲಾಯಿತು. ಆದರೆ ಕೆಲಸ ಮುಗಿದು ವರ್ಷಗಳು ಕಳೆದರೂ ವಿಮಾನಗಳ ಹಾರಾಟ ಕಾಣಿಸಲಿಲ್ಲ. ದ್ಯಾವಲಾಪುರ, ಮೈಲನಹಳ್ಳಿ, ತೆಂಡೆಹಳ್ಳಿ, ಲಕ್ಷ್ಮೀಸಾಗರ, ಬೂವನಹಳ್ಳಿ ಈ ಹಳ್ಳಿಗಳ ರೈತರು ಪ್ರತಿದಿನ ಕಷ್ಟ ಅನುಭವಿಸುತ್ತಿದ್ದಾರೆ ಎಂದರು.

ದಾಸೀಹಳ್ಳಿ ರಾಜರಾಜೇಶ್ವರಿ ಹುತ್ತದಮ್ಮ ದೇಗುಲದ ವಿಮಾನ ಗೋಪುರ ಕಳಶಾರೋಹಣ

Oct 27 2025, 12:00 AM IST
. ವಿಶೇಷ ಪುರೋಹಿತರ ನೇತೃತ್ವದಲ್ಲಿ ದೇವಿಯವರಿಗೆ ಅಭಿಷೇಕ, ನವದುರ್ಗ ಸಮೇತ ಚಂಡಿಕಾ ಹೋಮ, ಪ್ರತ್ಯಂಗಿರಿ ಹೋಮ ಹಾಗೂ ಮಹಾಪೂರ್ಣಾಹುತಿ ವಿಧಿಗಳು ಭಕ್ತಿಭಾವದಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜ ದಾಸೀಹಳ್ಳಿ ಗ್ರಾಮದ ಬೀದಿಗಳಲ್ಲಿ 108 ಕುಂಭಗಳ ಮೆರವಣಿಗೆ ಭಕ್ತಿ ಸಂಭ್ರಮವನ್ನು ಹೆಚ್ಚಿಸಿತು. ನಂತರ ವೃಶ್ಚಿಕ ಲಗ್ನದಲ್ಲಿ ಕಳಶಾರೋಹಣ, ಬಲಿ ಪ್ರಧಾನ ಹಾಗೂ ದೃಷ್ಟಿ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಸುತ್ತಮುತ್ತಲಿನ ಪ್ರದೇಶಗಳಿಂದ ಅಮ್ಮನಹಟ್ಟಿ ಗಂಗಾಮಾಳಿಕಾ ದೇವಿ, ಯಾದಾಪುರದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಸೇರಿದಂತೆ ಅನೇಕ ದೇವತೆಗಳ ಮೂರ್ತಿಗಳು ಆಗಮಿಸಿ ಕಾರ್ಯಕ್ರಮಕ್ಕೆ ವೈಭವ ತುಂಬಿದವು.