ಮಂಗಳೂರು ಸಬ್‌ರಿಜಿಸ್ಟ್ರಾರ್ ಕಚೇರಿ ಆನ್‌ಲೈನ್ ವಂಚನೆ ಕೇಸ್: ಬಿಹಾರದ ಮೂವರು ವಶಕ್ಕೆ?
Oct 29 2023, 01:00 AM ISTಮಂಗಳೂರಿನ ಉಪ ನೋಂದಣಿ ಕಚೇರಿಯಲ್ಲಿ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಕೊಟ್ಟಿರುವ ಗ್ರಾಹಕರ ಬ್ಯಾಂಕ್ ಖಾತೆಗಳಿಂದ ಹಣ ಕೀಳುವ ಸೈಬರ್ ಕನ್ನ ನಿರಂತರ ಮುಂದುವರಿದಿದೆ. ವಂಚನೆ ಪ್ರಕರಣವನ್ನು ಗಂಭೀರ ಪರಿಗಣಿಸಿದ ಮಂಗಳೂರು ಪೊಲೀಸರು ಬಿಹಾರ ಮೂಲದ ಮೂವರನ್ನು ವಶಕ್ಕೆ ಪಡೆದಿದ್ದಾರೆ