ಪರ್ಮಿಟ್ ಇಲ್ಲದೆ ಸಂಚರಿಸಿದ ಟಿಪ್ಪರ್ ವಶ : ಆನ್‌ಲೈನ್ ನಲ್ಲೇ ೧.೭೪ ಲಕ್ಷ ದಂಡ
Jan 15 2024, 01:49 AM ISTಪರ್ಮಿಟ್ ಇಲ್ಲದೆ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್‌ಗಳ ಮೇಲೆ ಭಾನುವಾರ ಬೆಳಗ್ಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ದಾಳಿ ನಡೆಸಿದ್ದಾರೆ. ರಾಜಪ್ಪ, ಪ್ರಭಾಕರ್, ಸೆಲ್ವಕುಮಾರ್‌ಗೆ ಸೇರಿದ ಮೂರು ಟಿಪ್ಪರ್‌ಗಳನ್ನು ಭಾನುವಾರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ಹಿರೀಕಾಟಿ ಬಳಿ ತಡೆದು ತಪಾಸಣೆ ನಡೆಸಿದಾಗ ಪರ್ಮಿಟ್ ವಂಚಿಸಿರುವುದು ಪತ್ತೆಯಾಗಿದೆ.