ವಿವಿಧತೆಯಲ್ಲಿ ಏಕತೆ ಸಾಧಿಸಿ ಸಹಬಾಳ್ವೆ ನಡೆಸುತ್ತಿರುವ ಕನ್ನಡಿಗರು: ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್
Nov 02 2025, 02:45 AM ISTಕವಿಗಳು, ಕಲಾವಿದರು ಕನ್ನಡ ಭಾಷೆ, ಸಾಹಿತ್ಯ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ೮ ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಕನ್ನಡ ಭಾಷಾ ಸಾಹಿತ್ಯದ ಹೆಮ್ಮೆಯ ದ್ಯೋತಕ. ಸುಮಾರು ೨ ಸಾವಿರ ವರ್ಷ ಇತಿಹಾಸವಿರುವ ಕನ್ನಡ ಭಾಷೆ ಇನ್ನೂ ಗಟ್ಟಿಯಾಗಿ ಬೆಳೆಸುವ ಸದುದ್ದೇಶದಿಂದ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯಾಗಿ ಘೋಷಿಸಿದೆ. ಕನ್ನಡ ನಾಡು-ನುಡಿಗೆ ಚಾಮರಾಜನಗರ ಜಿಲ್ಲೆ ಕೊಡುಗೆ ಅಪಾರ. ಚಾಮರಾಜನಗರ ಕರ್ನಾಟಕಕ್ಕೆ ಭಾಷೆಯ ತೊಟ್ಟಿಲಾಗಿದೆ. ಪಶ್ಚಿಮದ ಮೂಲೆಹೊಳೆಯಿಂದ ಪೂರ್ವದ ಹೊಗೇನಕಲ್‌ವರೆಗಿನ ಪ್ರದೇಶಗಳಲ್ಲಿ ಗಟ್ಟಿಯಾದ ಕನ್ನಡ ಭಾಷೆಯನ್ನಾಡುವ ಜನಸಮೂಹವಿದೆ.