ಕನ್ನಡಿಗರು ಕಸಾಪ ಸದಸ್ಯತ್ವ ಪಡೆದುಕೊಳ್ಳಿ
Dec 17 2023, 01:45 AM ISTಕೊರಟಗೆರೆ: ಕನ್ನಡ ಸಾಹಿತ್ಯ ಸಮೃದ್ಧವಾದ ಪರಂಪರೆಯನ್ನು ಹೊಂದಿದ್ದು ಕನ್ನಡಿಗರಾದ ನಾವು ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆಯುವ ಮೂಲಕ ಕನ್ನಡ ನಾಡು ಮತ್ತು ನುಡಿಯ ಹಿರಿಮೆಯನ್ನು ಬೆಳೆಗಿಸೊಣ್ಣ ಎಂದು ಕೊರಟಗೆರೆ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಈರಣ್ಣ ತಿಳಿಸಿದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ನೂತನವಾಗಿ ಆನೈಲ್‌ನ್ ಮೂಲಕ ಸಾಹಿತ್ಯ ಪರಿಷತ್‌ನ ಆಜೀವ ಸದಸ್ಯತ್ವ ಪಡೆದ ಸದಸ್ಯರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದರು.