16 ಸಾಧಕರಿಗೆ ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ‘ಅಸಾಮಾನ್ಯ ಕನ್ನಡಿಗರು’ ಸಮ್ಮಾನ

| Published : Oct 14 2023, 01:01 AM IST

16 ಸಾಧಕರಿಗೆ ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ‘ಅಸಾಮಾನ್ಯ ಕನ್ನಡಿಗರು’ ಸಮ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಹಿರಿಯ ಚಿತ್ರನಟ ಅನಂತನಾಗ್‌ ಸೇರಿದಂತೆ 16 ಮಂದಿ ಸಾಧಕರಿಗೆ ‘ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಹಿರಿಯ ಚಿತ್ರನಟ ಅನಂತನಾಗ್‌ ಸೇರಿದಂತೆ 16 ಮಂದಿ ಸಾಧಕರಿಗೆ ‘ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ಚಿತ್ರನಟ ರಕ್ಷಿತ್‌ ಶೆಟ್ಟಿ, ಏಷ್ಯಾನೆಟ್‌ ಸಮೂಹದ ಎಕ್ಸಿಕ್ಯೂಟಿವ್‌ ಚೇರ್ಮನ್‌ ರಾಜೇಶ್ ಕಾಲ್ರಾ, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಏಷ್ಯಾನೆಟ್‌ ಸುವರ್ಣನ್ಯೂಸ್‌ ಸಂಪಾದಕ ಅಜಿತ್ ಹನಮಕ್ಕನವರ್‌, ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣನ್ಯೂಸ್‌ ಬಿಸಿನೆಸ್‌ ಹೆಡ್‌ ಎನ್‌.ಕೆ.ಅಪ್ಪಚ್ಚು, ಪ್ರಶಸ್ತಿಗಳ ಪ್ರಾಯೋಜಕರು ಮುಂತಾದವರಿದ್ದರು.