ಸಾರಾಂಶ
ದೇವನಹಳ್ಳಿ: ಕನ್ನಡಿಗರು ಯಾವುದೇ ಕ್ಷೇತ್ರದಲ್ಲಿ ಎಂದೂ ಅಸಮರ್ಥರಲ್ಲ, ಬದಲಾಗಿ ಸಮರ್ಥರು ಎಂದು ಸಮ್ಮೇಳನಾಧ್ಯಕ್ಷ ಮುನಿಕೆಂಪಣ್ಣ ಹೇಳಿದರು.
ಜಿಲ್ಲಾಧಿಕಾರಿಗಳ ರಂಗ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ದೇವನಹಳ್ಳಿ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇಂದಿನ ನಾಗರಿಕ ಜಗತ್ತಿಗೆ ಅವಶ್ಯಕವಾಗಿ ಬೇಕಾಗಿರುವುದು ಶಿಕ್ಷಣ ಆರೋಗ್ಯ, ಆಹಾರ, ವಸತಿ, ಗಾಳಿ, ನೀರು ಮತ್ತು ಬೆಳಕು ಪ್ರಕೃತ್ತಿದತ್ತ ಕೊಡುಗೆಗಳು ಆದರೂ ಇಂದಿನ ದಿನಗಳಲ್ಲಿ ಹಣ ಕೊಟ್ಟು ಕೊಳ್ಳಬೇಕಿದೆ. ಹಾಗೆಯೇ ಶಿಕ್ಷಣ ಉಳ್ಳವರ ಪಾಲಾಗುತ್ತಿದೆ. ರೈತ ಮತ್ತು ಕಾರ್ಮಿಕರ ಮಕ್ಕಳಿಗೆ ಆಹಾರ ಮತ್ತು ಉನ್ನತ ಶಿಕ್ಷಣ ಸಿಗುವಂತಾಗಬೇಕು. ಯುವಕರಿಗೆ ವೃತ್ತಿಯಾಧಾರಿತ ತರಬೇತಿ ನೀಡಿ ನಿರುದ್ಯೋಗ ನಿವಾರಿಸಬೇಕು ಎಂದು ಹೇಳಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಕಲಿತರೂ, ಮಾತನಾಡಿದರೂ ಕನ್ನಡ ಭಾಷೆ ಬಗ್ಗೆ ಗೌರವ, ಅಭಿಮಾನವಿರಲಿ. ಕನ್ನಡದಲ್ಲಿ ವ್ಯವಹರಿಸಲು ಸರ್ಕಾರದಿಂದ ಸುತ್ತೋಲೆಗಳು ಅಲ್ಲದೆ ಅಧಿಸೂಚನೆಗಳು ಬರುತ್ತವೆ. ನಮ್ಮ ಕನ್ನಡ ಭಾಷೆ ಪ್ರಾಚೀನವಾದದು. ಅನ್ಯ ಭಾಷಿಕರಿಂದ ಕನ್ನಡ ಭಾಷೆಗೆ ಧಕ್ಕೆಯುಂಟಾಗಿದೆ. ಅನ್ಯ ಭಾಷಿಕರೂ ಕನ್ನಡದಲ್ಲೇ ವ್ಯವಹರಿಸುವಂತೆ ಮಾಡಬೇಕು. ನಮ್ಮ ಜಿಲ್ಲಾಡಳಿತದ ಸಂಪೂರ್ಣ ಸಹಕಾರವಿರುತ್ತದೆ. ಇಂತಹ ಸಾಹಿತ್ಯ ಸಮ್ಮೇಳನಗಳಿಂದ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಆರ್. ಕೆ. ನಂಜೇಗೌಡ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಸಂದೇಶದ ಪ್ರತಿಯನ್ನು ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಬಿಡುಗಡೆ ಮಾಡಿದರು.ಸಮಾರಂಭದಲ್ಲಿ ಹಿಂದಿನ ಸಮ್ಮೇಳನಾಧ್ಯಕ್ಷರಾದ ಶ್ರೀರಾಮಯ್ಯ, ಶರಣಯ್ಯ ಹಿರೇಮಠ್ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ರವಿಕುಮಾರ್ ಗಣ್ಯರು ಉಪಸ್ಥಿತರಿದ್ದರು.(ಫೋಟೋ ಕ್ಯಾಫ್ಷನ್) ಬೆಂ.ಗ್ರಾ. ಜಿಲ್ಲಾಧಿಕಾರಿಗಳ ರಂಗ ಮಂದಿರದಲ್ಲಿ ದೇವನಹಳ್ಳಿ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷರ ಮುನಿಕೆಂಪಣ್ಣ, ಜಿಲ್ಲಾಧಿಕಾರಿಗಳು, ಇತರ ಗಣ್ಯರು ಉದ್ಘಾಟಿಸಿದರು.