ಕಾಂಗ್ರೆಸ್ ಕುಟುಂಬದಲ್ಲಿ ಹೆಚ್ಚು ಕಡಿಮೆ ಸಹಜ: ಶಾಸಕ ಶಿವಗಂಗಾ
Jun 25 2025, 12:33 AM ISTಭ್ರಷ್ಟಾಚಾರ ತಡೆಯಲೆಂದೇ ಆಯಾ ಕ್ಷೇತ್ರದ ಮತದಾರರು ಶಾಸಕರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ವಸತಿ ಹಂಚಿಕೆಯಲ್ಲಿ ಭ್ರಷ್ಟಾಚಾರ ಏಕೆ ನಡೆಯುತ್ತಿದೆ? ಕಾಂಗ್ರೆಸ್ ಕುಟುಂಬದಲ್ಲಿ ಒಂದಿಷ್ಟು ಹೆಚ್ಚು ಕಡಿಮೆ ಇರುವುದು ಸಹಜ. ಸಿಎಲ್‌ಪಿ ಸಭೆಯಲ್ಲಿ ಸುಮ್ಮನೇ ಕುಳಿತು, ಮಾಧ್ಯಮಗಳ ಬಳಿ ಮಾತನಾಡುತ್ತಾರಷ್ಟೇ ಎಂದು ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರ ಬಗ್ಗೆ ಸ್ಪಪಕ್ಷದ ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಬೇಸರ ವ್ಯಕ್ತಪಡಿಸಿದ್ದಾರೆ.