ಸಾರಾಂಶ
ಬಿಜೆಪಿ ಜತೆ ಸೇರಿಕೊಂಡು ಚುನಾವಣಾ ಆಯೋಗ ಮತಗಳ್ಳತನ ನಡೆಸಿದೆ ಎಂಬ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆ.17ರಿಂದ ಬಿಹಾರದಿಂದ ‘ಮತದಾರ ಅಧಿಕಾರ ಯಾತ್ರೆ’ಯನ್ನು ಆರಂಭಿಸುವ ಮೂಲಕ ಆಯೋಗದ ವಿರುದ್ಧ ನೇರ ಹಣಾಹಣಿಗೆ ಮುಂದಾಗಲಿದೆ ಎಂದು ಘೋಷಿಸಿದ್ದಾರೆ.
ನವದೆಹಲಿ : ಬಿಜೆಪಿ ಜತೆ ಸೇರಿಕೊಂಡು ಚುನಾವಣಾ ಆಯೋಗ ಮತಗಳ್ಳತನ ನಡೆಸಿದೆ ಎಂಬ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆ.17ರಿಂದ ಬಿಹಾರದಿಂದ ‘ಮತದಾರ ಅಧಿಕಾರ ಯಾತ್ರೆ’ಯನ್ನು ಆರಂಭಿಸುವ ಮೂಲಕ ಆಯೋಗದ ವಿರುದ್ಧ ನೇರ ಹಣಾಹಣಿಗೆ ಮುಂದಾಗಲಿದೆ ಎಂದು ಘೋಷಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಆ.17ರಿಂದ ಮತದಾರ ಅಧಿಕಾರ ಯಾತ್ರೆಯನ್ನು ಆರಂಭಿಸುವ ಮೂಲಕ ಬಿಹಾರದ ಮಣ್ಣಿನಿಂದಲೇ ಚುನಾವಣಾ ಆಯೋಗದ ಮತಗಳ್ಳತನದ ವಿರುದ್ಧ ನೇರ ಯುದ್ಧ ಮಾಡಲಿದ್ದೇವೆ. ಇದು ಕೇವಲ ಚುನಾವಣಾ ಸಮಸ್ಯೆಗಾಗಿ ಅಲ್ಲ, ಇದು ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ‘ಒಬ್ಬ ವ್ಯಕ್ತಿ-ಒಂದು ಮತ’ ನೀತಿಯನ್ನು ರಕ್ಷಿಸಲು ನಡೆಯುತ್ತಿರುವ ನಿರ್ಣಾಯಕ ಯುದ್ಧ’ ಎಂದು ತಿಳಿಸಿದ್ದಾರೆ.ಯಾತ್ರೆಯು ಆ.17ರಂದು ಸಸಾರಾಂನಲ್ಲಿ ಆರಂಭವಾಗಿ ಸೆ.1ರಂದು ಪಟನಾದ ಗಾಂಧಿ ಮೈದಾನದಲ್ಲಿ ನಡೆಯುವ ರ್‍ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ.