ರುದ್ರಣ್ಣ ಪ್ರಕರಣ ಸಿಬಿಐ ತನಿಖೆಗೆ ರಾಷ್ಟ್ರಪತಿ, ಪಿಎಂ ಕಚೇರಿಗೆ ಪತ್ರ
Nov 26 2024, 12:47 AM ISTಬೆಳಗಾವಿಯ ತಹಸೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತ) ಎಸ್ಡಿಎ ರುದ್ರಣ್ಣ ಯಡವನ್ನವರ ಆತ್ಮಹತ್ಯೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ. ಹೀಗಾಗಿ ಇದೀಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಕೋರಿ ತಹಸೀಲ್ದಾರ್ ಕಚೇರಿಯ ಅನಾಮಿಕರೊಬ್ಬರು ರಾಷ್ಟ್ರಪತಿ, ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ. ಹಾಗಾಗಿ, ಈ ಪ್ರಕರಣ ಈಗ ರಾಷ್ಟ್ರಪತಿ, ಪ್ರಧಾನಿ ಅಂಗಳಕ್ಕೂ ಹೋದಂತಾಗಿದೆ.