ಮಾನಸಿಕ ಒತ್ತಡ ದೂರವಾಗದೆ ನೆಮ್ಮದಿ ಸಾಧ್ಯವಿಲ್ಲ: ಸನತ್ ಕುಮಾರ್
Oct 14 2025, 01:00 AM ISTಒತ್ತಡ ಎಂಬುದು ಎಲ್ಲರಲ್ಲೂ ಒಂದು ರೀತಿ ಅವಿಭಾಜ್ಯ ಅಂಗವಾಗಿದೆ. ಸರಳ ಬದುಕು, ಉತ್ತಮ ಆಲೋಚನೆ ಚಿಂತನೆಗಳಿಲ್ಲದೆ ಕ್ಷಣಿಕ ಆಸೆ, ಆಮಿಷಕ್ಕೆ ಒತ್ತಡವನ್ನು ಸ್ವಯಂ ತಂದುಕೊಳ್ಳುವಂತಾಗಿದೆ. ಯಾಂತ್ರಿಕ, ಐಷಾರಾಮಿ ಬದುಕಿಗೆ ಜೋತು ಬಿದ್ದು ಮನುಷ್ಯ ಮಾನಸಿಕ ಒತ್ತಡದ ಬದುಕಿಗೆ ಒಳಗಾಗುತ್ತಿದ್ದಾರೆ.