ಸಿಪಿ ಯೋಗೇಶ್ವರ್ ಭಾವ ಮಹದೇವಯ್ಯ ಶವವಾಗಿ ಪತ್ತೆ
Dec 05 2023, 01:30 AM ISTಕಳೆದ ಮೂರು ದಿನಗಳ ಹಿಂದೆ ಚನ್ನಪಟ್ಟಣದ ಚಕ್ಕೆರೆ ತೋಟದ ಮನೆಯಿಂದ ನಾಪತ್ತೆಯಾಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ರವರ ಭಾವ, ಉದ್ಯಮಿ, ಮೆಗಾ ಸಿಟಿ ನಿರ್ದೇಶಕ ಮಹದೇವಯ್ಯನವರ ಶವ ಸೋಮವಾರ ಪತ್ತೆಯಾಗಿದೆ.ರಾಮಾಪುರದಿಂದ ನಾಲ್ ರೋಡ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದ ಮಲೆ ಮಹದೇಶ್ವರ ವನ್ಯಧಾಮದ ದೊಡ್ಡ ಬಂಡೆ ಸಮೀಪ 50 ಅಡಿ ಅಳದ ಕಂದಕದಲ್ಲಿ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.