ರೈತ ಚಳವಳಿಗಳು ಮತ್ತೆ ಬಲಗೊಳ್ಳಬೇಕಿದೆ
Oct 10 2024, 02:16 AM ISTಶೇ. 93 ರಷ್ಟಿದ್ದ ಕೃಷಿಕರನ್ನು ಆಡಳಿತಾರೂಢ ಸರ್ಕಾರಗಳು ಅಲಕ್ಷ್ಯ ಮಾಡಿ ಅಭಿವೃದ್ಧಿಯ ಹೆಸರಿನಲ್ಲಿ ಕೈಗಾರಿಕೆಗಳ ಬೆನ್ನು ಬಿದ್ದ ಪರಿಣಾಮ ಕೃಷಿಕ್ಷೇತ್ರ ಬಡವಾಗಿ, ರೈತರ ಬದುಕು ಹೀನಾಯ ಸ್ಥಿತಿ ತಲಪಿದೆ. ರೈತರು 80ರ ದಶಕದಲ್ಲಿ ಚಳುವಳಿಗೆ ಇಳಿದಾಗ ಬೆದರಿದ ಸರ್ಕಾರ ಚಳವಳಿ ಹತ್ತಿಕ್ಕಲು ರೈತರ ಮೇಲೆ ಗುಂಡು ಹಾರಿಸಿತು. 90 ರದಶಕದಲ್ಲಿ ಗ್ಯಾಟ್ ಒಪ್ಪಂದವಾದ ಬಳಿಕ ಅಂತಾರಾಷ್ಟ್ರೀಯ ಶಕ್ತಿಗಳು ಕೃಷಿಯನ್ನು ವ್ಯಾಪಾರೀಕರಣಗೊಳಿಸುವ ಮೂಲಕ ಕೃಷಿಯ ಮೇಲಿನ ರೈತರ ಹಕ್ಕನ್ನು ನಾಶಗೊಳಿಸಿ ರೈತರನ್ನು ಭಿಕ್ಷುಕರನ್ನಾಗಿಸಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆ.ಸಿ. ಬಸವರಾಜ್ ಹೇಳಿದರು.