ಯಾವತ್ತು ಜಾತಿ ಜನಗಣತಿ ಬಿಡುಗಡೆ ಮಾಡ್ತಾರೋ ಅವತ್ತೇ ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕ್ಲೋಸ್
Dec 01 2023, 12:45 AM ISTಒಂಬತ್ತು ವರ್ಷಗಳಿಂದ ಸಿದ್ದರಾಮಯ್ಯ ಜಾತಿಗಣತಿ ಬಗ್ಗೆ ಹೇಳುತ್ತಿದ್ದಾರೆ. ವಿಧಾನ ಪರಿಷತ್ತನಲ್ಲಿ ನಾನೇ ಹತ್ತು ಬಾರಿ ಕೇಳಿದ್ದೇನೆ, ಅದರ ಬಗ್ಗೆ ಮಾತನಾಡಲಿಲ್ಲ. ಯಾವಾಗ ಜಾತಿ ಜನಗಣತಿ ರಿಲೀಸ್ ಮಾಡ್ತೀರಿ ಅಂದರೆ ನಾಳೆ, ನಾಡಿದ್ದು, ಆಚೆ ನಾಡಿದ್ದು, ರೆಡಿ ಆಗುತ್ತಿದೆ ಎಂದು ಹಾರಿಕೆ ಉತ್ತರ ಕೊಡುತ್ತಲೇ ಬಂದರು. ನಾನು ಇಳಿಯುವುದರೊಳಗಾಗಿ ಕೊಟ್ಟೇ ಇಳಿಯುತ್ತೇನೆ ಅಂದಿದ್ರು. ಇವತ್ತಿನವರೆಗೂ ಅದು ಆಗಿಲ್ಲ. ನಾನು ಅಂದೇ ಹೇಳಿದ್ದೆ, ನೀವು ಜಾತಿ ಜಾತಿ ನಡುವೆ ಬೆಂಕಿ ಹಚ್ವುತ್ತೀರಿ ಎಂದು ಸಿದ್ದರಾಮಯ್ಯ ವಿರುದ್ಧ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ.