‘ಆ ನಟಿ ನನ್ನಂತೆಯೇ ಇನ್ನೂ ಮೂವರಿಗೆ ವಂಚನೆ ಮಾಡಿದ್ದಾರೆ. ಆ ಮೂವರು ನನ್ನ ಸಂಪರ್ಕಕ್ಕೆ ಬಂದಿದ್ದಾರೆ’ ಎಂದು ಉದ್ಯಮಿ ಹಾಗೂ ಸಿನಿಮಾ ನಿರ್ಮಾಪಕ ಅರವಿಂದ್ ವೆಂಕಟೇಶ್ ಅವರು ತನ್ನ ವಿರುದ್ಧ ದೂರು ನೀಡಿದ ನಟಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಮುಂದೆ ಅವಧಿ ಮೀರಿ ಪಟಾಕಿ ಹೊಡೆಯುವವರು ಯೋಚಿಸಿ ಇಲ್ಲವಾದರೆ ಕಾನೂನಿನ ಸಂಕಷ್ಟ ಎದುರಿಸಬೇಕಾದೀತು. ನಗರದಲ್ಲಿ ಈಗಾಗಲೇ ಅಳವಡಿಸಿರುವ ಕ್ಯಾಮೆರಾಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಾಫ್ಟ್ವೇರ್ ಒಂದನ್ನು ಪ್ರಾಯೋಗಿಕವಾಗಿ ಅಳವಡಿಸಿದ್ದು, ಇತರೆ ಕ್ಯಾಮೆರಾಗಳಿಗೂ ವಿಸ್ತರಿಸಲು ಚಿಂತನೆ
ನಗರದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ನಿಗದಿತ ಅವಧಿಗಿಂತ ಮೊದಲೇ ರೈಲು ಆರಂಭಿಸಲು ಒತ್ತಾಯಿಸಿ ಸುಮಾರು 15 ಜನರ ಗುಂಪು ರೈಲನ್ನು ತಡೆದು ಗಲಾಟೆ ಮಾಡಿದ್ದರಿಂದ ಹಳದಿ ಮೆಟ್ರೋ ಮಾರ್ಗದ ಸಂಚಾರ ಅರ್ಧ ಗಂಟೆ ವಿಳಂಬವಾದ ಘಟನೆ ಸೋಮವಾರ ನಡೆದಿದೆ.
ನಗರದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕಾರ್ತಿಕ ಕಡೆಯ ಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು. ಬುಲ್ಟೆಂಪಲ್ ರಸ್ತೆಯುದ್ದಕ್ಕೂ ಕಡಲೆಕಾಯಿಯ ಘಮ ಆವರಿಸಿದ್ದು, ಸಾಂಸ್ಕೃತಿಕ ಪರಂಪರೆ ಮೇಳೈಸಿದೆ. ಮೊದಲ ದಿನವೇ ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿ ಗ್ರಾಮೀಣ ಸೊಗಡನ್ನು ಸವಿದರು.
ನಗರ ಸೌಂದರ್ಯೀಕರಣಕ್ಕೆಂದು ಕೈಗೆತ್ತಿಕೊಂಡ, ಬೀದಿದೀಪಗಳ ಅಳವಡಿಕೆ ಹೆಸರಲ್ಲಿ ಕೋಟ್ಯಂತರ ರುಪಾಯಿಗಳ ಹಣ ಲೂಟಿ ಹೊಡೆಯಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. 1 ಕೋಟಿ ರು.ಗಳ ವೆಚ್ಚದ ಈ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ ವಹಿಸಲಾಗಿತ್ತು.
ಧ್ರುವ ಸರ್ಜಾ ಹಾಗೂ ನಿರ್ದೇಶಕ ರಾಜ್ಗುರು ಅವರ ಕಾಂಬಿನೇಶನ್ನಲ್ಲಿ ಬರಲಿರುವ ಹೊಸ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಮತ್ತೆ ಧ್ರುವ ಸರ್ಜಾ ಹಾಗೂ ರಚಿತಾ ರಾಮ್ ತೆರೆ ಮೇಲೆ
ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ಹಲವು ದೇಶಗಳಿಂದ ಬಂದ ಪತ್ರಕರ್ತರ ಉಪಸ್ಥಿತಿಯಲ್ಲಿ, 130 ಅಡಿ ಎತ್ತರದ, 130 ಅಡಿ ಅಗಲದ ಬೃಹತ್ತಾದ ಎಲ್ಇಡಿ ಸ್ಕ್ರೀನ್ನಲ್ಲಿ ಎಸ್.ಎಸ್.ರಾಜಮೌಳಿ ತನ್ನ ಹೊಸ ಸಿನಿಮಾದ ಶೀರ್ಷಿಕೆ ಮತ್ತು ನಾಯಕ ನಟ ಮಹೇಶ್ ಬಾಬು ಅವರ ಫಸ್ಟ್ ಲುಕ್ ಟೀಸರನ್ನು ಬಿಡುಗಡೆ
ಸಂಘ ಸ್ಥಾಪನೆ ಆಗಿ ಕೆಲವೇ ವರ್ಷಗಳಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ಸ್ವಯಂಸೇವಕರು ಅದರ ನಿತ್ಯಶಾಖೆಗಳಲ್ಲಿ ಭಾಗವಹಿಸಲಾರಂಭಿಸಿದ್ದರು. ದಿನೇ ದಿನೇ ಸಂಘಟನೆಯ ಜನಪ್ರಿಯತೆ ವೃದ್ಧಿಯಾಗತೊಡಗಿತು. ರಾಷ್ಟ್ರಪರ ಸಂಘಟನೆಯೊಂದರ ಬಿರುಸಿನ ವ್ಯಾಪಕತೆಯು ಆಡಳಿತಾರೂಢ ಬ್ರಿಟಿಷ್ ಸರಕಾರದ ನಿದ್ದೆಕೆಡಿಸಲಾರಂಭಿಸಿತ್ತು.
ಇಷ್ಟಾದರೂ ಪಟ್ಟು ಹಿಡಿದ ಪತ್ರಕರ್ತರೊಬ್ಬರು ಪುನಃ ಅದೇ ಪ್ರಶ್ನೆ ದೊಡ್ಡ ಧ್ವನಿಯಲ್ಲಿ ಕೇಳಿದಾಗ, ಸಲೀಂ ಅಹಮದ್ ಅವರು ಕೂಲ್ ಆಗಿ ‘ಇಂಥ ಪ್ರಶ್ನೆಯೇ ನನಗೆ ಕೇಳಿಸಲ್ಲ, ಬೇರೆ ಪ್ರಶ್ನೆ ಕೇಳಿ’ ಎಂದು ನಗುತ್ತಾ ಉತ್ತರಿಸಿದಾಗ ಸಾವರಿಸಿಕೊಳ್ಳುವ ಸರದಿ ಮಾಧ್ಯಮ ಮಂದಿಯದ್ದಾಗಿತ್ತು.
ಭಾರತೀಯ ವೇಗಿ ಜಸ್ಪ್ರೀತ್ ಬೂಮ್ರಾ, ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾರನ್ನು ‘ಕುಬ್ಜ’ ಎಂದು ಹಂಗಿಸಿದ್ದರು. ಆದರೆ ಸಣ್ಣ ಮೊತ್ತವನ್ನೂ ಬೆನ್ನತ್ತಿ ಗೆಲ್ಲಲಾಗದೆ ಸೋತು, ನಿಜವಾಗಿಯೂ ಸಣ್ಣವರಾಗಿದ್ದು ಯಾರು ಎಂಬುದನ್ನು ಈಗ ಅದೇ ಬವುಮಾ ಟೀಮ್ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದೆ.