ನೇರಮಾತು, ನಿಷ್ಠುರ ದನಿ, ಪ್ರಖರ ಚಿಂತನೆ, ಸ್ಪಷ್ಟ ರಾಜಕೀಯ ನಿಲುವು ಮತ್ತು ಪ್ರಜಾಪ್ರಭುತ್ವದ ಮೇಲೆ ಗಾಢ ನಂಬಿಕೆ ಇಟ್ಟಿದ್ದ ಪತ್ರಕರ್ತ, ಸಂಪಾದಕ, ಲೇಖಕ, ಜೀವನಚರಿತ್ರಕಾರ, ಪ್ರಬಂಧಕಾರ ಟಿಜೆಎಸ್ ಜಾರ್ಜ್ ಬರೆವಣಿಗೆ ನಿಲ್ಲಿಸಿದ್ದಾರೆ.
ಖ್ಯಾತ ಪತ್ರಕರ್ತ, ಲೇಖಕ ಹಾಗೂ ‘ಕನ್ನಡಪ್ರಭ’ ಪತ್ರಿಕೆ ಅಂಕಣಕಾರರಾಗಿದ್ದ ಪದ್ಮಭೂಷಣ ಟಿ.ಜೆ.ಎಸ್.ಜಾರ್ಜ್ (97) ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದ್ದಾರೆ.
ರಾಜ್ಯ ಸರ್ಕಾರದ 2021ನೇ ಕ್ಯಾಲೆಂಡರ್ ವರ್ಷದ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಹಾಗೂ ರಕ್ಷಿಶ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ಕೇಂದ್ರ ₹3705 ಕೋಟಿ ತೆರಿಗೆ ಪಾಲು ಹಂಚಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿದೆದ್ದಿದ್ದಾರೆ. ‘ ಉದ್ದೇಶಪೂರ್ವಕವಾಗಿಯೇ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿರುವ ಅವರು, ಅಗತ್ಯ ಬಿದ್ದರೆ ನ್ಯಾಯಾಲಯದ ಮೆಟ್ಟಿಲೇರಿ ನಮ್ಮ ಪಾಲನ್ನು ನಾವು ಪಡೆಯುತ್ತೇವೆ’ ಎಂದಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಆ ಕುರಿತು ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸೂಚನೆ ನೀಡಲಾಗಿದೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ವಿಷವಿಕ್ಕಿ 5 ಹುಲಿಗಳ ಹತ್ಯೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹುಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದೆ.
ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ರಾಷ್ಟ್ರೀಯ ಕ್ರಶ್ ಕೊಡಗು ಮೂಲದ ರಶ್ಮಿಕಾ ಮಂದಣ್ಣ ಅವರ ಸಂಬಂಧದ ಬಗ್ಗೆ ಹಲವು ತಿಂಗಳಿಂದ ಹರಿದಾಡುತ್ತಿರುವ ಗುಸುಗುಸು ಈಗ ನಿಜವಾಗಿದ್ದು, ಅವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿ
ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಲಾಭಗಳ ಕುರಿತು ಕೊಲಂಬಿಯಾ ವಿವಿಯ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ವಿವರಿಸಲು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಳಸಿದ ಉದಾಹರಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ನಗೆಪಾಟಲಿಗೆ ಈಡಾಗಿದೆ.
ಬೆಕ್ಕಿನ ಕೂಗನ್ನು ಹೋಲುವ ಹೊಸ ಫ್ಯಾಶನ್ ಟ್ರೆಂಡ್ ‘ಮಿಯು ಮಿಯು’ . ಪ್ಲೇ ಫುಲ್ ಅಂತೀವಲ್ಲ, ಆ ಥರದ ಹುಡುಗಿಯರಿಗೆ ಇದು ಬಹಳ ಇಷ್ಟ. ಬಾಲಿವುಡ್ ಹುಡುಗಿ ಜಾನ್ವಿ ಕಪೂರ್ಗಂತೂ ಇದು ಮೋಸ್ಟ್ ಫೇವರಿಟ್ ಅಂತೆ.
ರಕ್ಷಿತ್ ಶೆಟ್ಟಿ ನಟನೆಯಲ್ಲಿ ಕಿರಣ್ರಾಜ್ ನಿರ್ದೇಶಿಸಿದ್ದ ‘777 ಚಾರ್ಲಿ’ ಸಿನಿಮಾ ತೆರೆಕಂಡು ಮೂರು ವರ್ಷ ಕಳೆಯುತ್ತಾ ಬಂದಿದೆ. ಇದೀಗ ನಿರ್ದೇಶಕ ಕಿರಣ್ರಾಜ್ ಹೊಸ ಸ್ಕ್ರಿಪ್ಟ್ ರೆಡಿ ಮಾಡಿದ್ದಾರೆ. ನಾಯಿಯನ್ನು ಪ್ರಧಾನವಾಗಿಟ್ಟು ಹೊಸ ಸಿನಿಮಾ ಮಾಡುತ್ತಿದ್ದಾರೆ. ಆ ಬಗ್ಗೆ ಅವರ ಮಾತು..