ಸಾರಾಂಶ
ಅಪ್ರಾಪ್ತ ನಾದಿನಿಯನ್ನು ಗರ್ಭಿಣಿ ಮಾಡಿದ ಭಾವನಿಗೆ 25 ವರ್ಷ ಕಠಿಣ ಸಜೆದುದ್ದಗೆರೆ ಗ್ರಾಮದ ರಾಚಯ್ಯ ಎಂಬವರ ಪುತ್ರ ರಾಚಪ್ಪ ಶಿಕ್ಷೆಗೊಳಗಾದವನು
ದುದ್ದಗೆರೆ ಗ್ರಾಮದ ರಾಚಯ್ಯ ಎಂಬವರ ಪುತ್ರ ರಾಚಪ್ಪ ಶಿಕ್ಷೆಗೊಳಗಾದವನು
ಕನ್ನಡಪ್ರಭ ವಾರ್ತೆ ಮೈಸೂರುಅಪ್ರಾಪ್ತ ವಯಸ್ಸಿನಿ ನಾದಿನಿಯನ್ನು ಗರ್ಭಿಣಿ ಮಾಡಿದ ವ್ಯಕ್ತಿಯೊಬ್ಬನಿಗೆ ಇಲ್ಲಿನ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೈಮ ಖಮ್ರೋಜ್ ಅವರು ಮಂಗಳವಾರ 25 ವರ್ಷಗಳ ಕಠಿಣ ಸಜೆ ಹಾಗೂ ಒಂದು ಲಕ್ಷ ರು. ದಂಡ ವಿಧಿಸಿದ್ದಾರೆ.
ಮೈಸೂರು ತಾ.ದುದ್ದಗೆರೆ ಗ್ರಾಮದ ರಾಚಯ್ಯ ಎಂಬವರ ಪುತ್ರ ರಾಚಪ್ಪ ಶಿಕ್ಷೆಗೊಳಗಾದವನು. ಈತನಿಗೆ ವಿವಾಹವಾಗಿತ್ತು. ಅಡುಗೆ ಕೆಲಸ ಮಾಡುತ್ತಿದ್ದ ಈತ ಹೆಚ್ಚಾಗಿ ಮಾವನ ಮನೆಯಲ್ಲಿಯೇ ಇರುತ್ತಿದ್ದ. ಅಪ್ರಾಪ್ತ ವಯಸ್ಸಿನ ನಾದಿನಿಯ ಜೊತೆ ಸಲುಗೆಯಿಂದಲೇ ಇರುತ್ತಿದ್ದ. 2022ರ ಮಾರ್ಚ್‌ನಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನಾದಿನಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದಾದ ನಂತರವೂ ಹಲವಾರು ಬಾರಿ ದೈಹಕಿ ಸಂಪರ್ಕ ಬೆಳೆಸಿದ್ದ. ಆಕೆ ಗರ್ಭಿಣಿಯಾಗಿದ್ದರಿಂದ ವಿಷಯ ಬಹಿರಂಗವಾಗಿ ಆಕೆಯ ತಾಯಿ ವರುಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಸ್ವರ್ಣ ಅವರು ಆರೋಪಿಯ ವಿರುದ್ಧ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ಈಗ ಆರೋಪ ಸಾಬೀತಾಗಿದೆ.ದಂಡದ ಮೊತ್ತದಲ್ಲಿ ಅಪ್ರಾಪ್ತ ನಾದಿನಿಗೆ 75 ಸಾವಿರ ರು. ನೀಡಬೇಕು ಎಂದಿರುವ ನ್ಯಾಯಾಧೀಶರು ಆಕೆ ಐದು ಲಕ್ಷ ರು. ಪರಿಹಾರಕ್ಕೆ ಅರ್ಹಳು ಎಂದಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂರ್ ಕೆ.ಬಿ. ಜಯಂತಿ ವಾದ ಮಂಡಿಸಿದ್ದರು.