ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಸ್ನೇಹಿತನ ಮನೆಯ ಹಬ್ಬಕ್ಕೆ ಮದ್ಯ ತರಲು ಬಾರ್ ಹೋದ ವ್ಯಕ್ತಿಯ ಮೇಲೆ ಮಫ್ತಿಯಲ್ಲಿದ್ದ ಮುಖ್ಯಪೇದೆಯಿಂದ ಹಲ್ಲೆ ನಡೆಸಿ, ಕಣ್ಣಿನ ದೃಷ್ಟಿಯನ್ನೇ ಕಳೆದು ಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ.

ಹಲ್ಲೆ ಮಾಡಿದ ಮುಖ್ಯಪೇದೆ ಪರಶುರಾಮ್ ವಿರುದ್ಧ ದೂರು ನೀಡಿದರೂ ಸಹ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಹಲ್ಲೆಗೊಳಗಾದ ವ್ಯಕ್ತಿ ದೂರಿದ್ದಾರೆ.

ಮೈಸೂರು ತಾಲೂಕಿನ ಬೆಳವಾಡಿ ಸಮೀಪದ ಬಸವನಹಳ್ಳಿ ಗ್ರಾಮದ ಆರ್‌. ಸ್ವಾಮಿ ಮನೆಗಳಿಗ ಟೈಲ್ಸ್ ಹಾಕುವ ಮೇಸ್ತ್ರಿ ಕಾರ್ಮಿಕನಾಗಿದ್ದು, ಕೆ.ಆರ್. ನಗರ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮದ ಮನೆಗಳಿಗೆ ಟೈಲ್ಸ್ ಹಾಕುವ ಗುತ್ತಿಗೆ ಪಡೆದಿದ್ದರು ಎನ್ನಲಾಗಿದೆ.

ಪಟ್ಟಣದ ಮೈಸೂರು- ಹಾಸನ ರಸ್ತೆಯಲ್ಲಿರುವ ಬಾರ್ ವೊಂದರಲ್ಲಿ ಸ್ನೇಹಿತನ ಮನೆಯ ಹಬ್ಬಕ್ಕೆ ಡ್ರಿಂಕ್ಸ್ ಖರೀದಿಸುವ ವೇಳೆ ಮಾತಿನ ಚಕಮಕಿ ನಡೆದು ಸಣ್ಣಪುಟ್ಟ ಗಲಾಟೆ ನಡೆದು, ಬಾರ್ ನಿಂದ ಹೊರ ಬಂದ ವೇಳೆ ಬುಲೆಟ್ ಬೈಕ್ ನಲ್ಲಿ ಮಫ್ತಿಯಲ್ಲಿ ಬಂದ ಮುಖ್ಯಪೇದೆ ಪರಶುರಾಮ್ ಗಲಾಟೆ ಬಗ್ಗೆ ತಿಳಿಯದೇ ಏಕಾಏಕಿ ನನಗೆ ಕಾಲಿನಿಂದ ಒದ್ದರು, ಕಣ್ಣಿನ ಚಿಕಿತ್ಸೆ ಆಗಿದ್ದರು ಹೊಡೆಯ ಬೇಡಿ ಎಂದು ಎಷ್ಟೇ ಬೇಡಿಕೊಂಡರು ಬಿಡದೇ ಬಲವಾಗಿ ಕಣ್ಣಿನ ಭಾಗಕ್ಕೆ ಮುಷ್ಠಿಯಿಂದ ಹೊಡೆದರು, ಆಗ ನಾನು ಜೋರಾಗಿ ಕಿರುಚಿ ಸ್ಥಳದಲ್ಲಿ ಬಿದ್ದೆ, ಪ್ರಜ್ಞೆ ಬಂದಾಗ ಮೈಸೂರಿನ ಡಿ.ಆರ್.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದರು, ವೈದ್ಯರು ಚಿಕಿತ್ಸೆ ನೀಡಿ ನೇತ್ರಧಾಮ ಕಣ್ಣಿನ ಆಸ್ಪತ್ರೆಗೆ ಸೇರಿಸಲಾಯಿತು. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಎಡಭಾಗದ ಕಣ್ಣು ಸಂಪೂರ್ಣವಾಗಿ ದೃಷ್ಟಿ ದೋಷವಾಗಿದೆ ಎಂದು ತಿಳಿಸಿದ ಕೂಡಲೇ ನನಗೆ ಸರ್ವಸ್ವವನ್ನೂ ಕಳೆದು ಕೊಂಡಂತೆ ಆಯಿತು.


ನನಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಅವರ ಭವಿಷ್ಯ ರೂಪಿಸುವುದರೂ ಹೇಗೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವಲತ್ತುಕೊಂಡು ನನಗೆ ನ್ಯಾಯ ದೊರಕಿಸಿ ಎಂದು ಕೋರಿದ್ದಾರೆ.

ಘಟನೆ ನಡೆದು ವಾರ ಕಳೆದರೂ ಮುಖ್ಯಪೇದೆ ಪರಶುರಾಮ್ ವಿರುದ್ದ ದೂರು ದಾಖಲಿಸಿಲ್ಲ, ದೂರು ವಾಪಸು ಪಡೆಯುವಂತೆ ಪೊಲೀಸ್ ಮುಖ್ಯಪೇದೆ ದೂರುದಾರನಾದ ನನಗೆ ಧಮ್ಕಿ ಹಾಕುಸುತ್ತಿದ್ದಾರೆ ಆಳಲನ್ನು ತೋಡಿಕೊಂಡಿದ್ದಾರೆ.

ನ್ಯಾಯಾಲಯದ ಅನುಮತಿ ಪಡೆಯಬೇಕು:

ಮುಖ್ಯಪೇದೆ ಪರಶುರಾಮ್ ಅವರ ಮೇಲೆ ಎಫ್.ಐ.ಆರ್ ದಾಖಲಿಸು ನ್ಯಾಯಾಲದ ಅನುಮತಿ ಪಡೆಯಬೇಕಾಗಿದೆ, ಹಾಗಾಗಿ ವಿಳಂಬವಾಗಿದೆ ತಕ್ಷಣವೇ ಎಫ್.ಐ.ಆರ್. ಮಾಡುತ್ತೇವೆ ಎಂದು ಪಟ್ಟಣದ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಪತ್ರಿಕೆಗೆ ಮಾಹಿತಿ ನೀಡಿದರು.