ಪಾದಾಚಾರಿಯನ್ನು ಅಡ್ಡಗಟ್ಟಿ ಆನ್‌ಲೈನ್‌ನಲ್ಲಿ ₹5 ಸಾವಿರ ಹಾಕಿಸಿಕೊಂಡ ದುಷ್ಕರ್ಮಿ

| Published : Mar 05 2024, 01:30 AM IST

ಪಾದಾಚಾರಿಯನ್ನು ಅಡ್ಡಗಟ್ಟಿ ಆನ್‌ಲೈನ್‌ನಲ್ಲಿ ₹5 ಸಾವಿರ ಹಾಕಿಸಿಕೊಂಡ ದುಷ್ಕರ್ಮಿ
Share this Article
  • FB
  • TW
  • Linkdin
  • Email

ಸಾರಾಂಶ

ಇಬ್ಬರು ದುಷ್ಕರ್ಮಿಗಳು ಪಾದಚಾರಿಯೊಬ್ಬರನ್ನು ಹಿಂಬಾಲಿಸಿ ಅಡ್ಡಗಟ್ಟಿ ಬೆದರಿಸಿ ಆನ್‌ಲೈನ್ ಮೂಲಕ ಐದು ಸಾವಿರ ರುಪಾಯಿ ವರ್ಗಾಯಿಸಿಕೊಂಡು ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಬ್ಬರು ದುಷ್ಕರ್ಮಿಗಳು ಪಾದಚಾರಿಯೊಬ್ಬರನ್ನು ಹಿಂಬಾಲಿಸಿ ಅಡ್ಡಗಟ್ಟಿ ಬೆದರಿಸಿ ಆನ್‌ಲೈನ್ ಮೂಲಕ ಐದು ಸಾವಿರ ರುಪಾಯಿ ವರ್ಗಾಯಿಸಿಕೊಂಡು ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾರತ್ತಹಳ್ಳಿ ನಿವಾಸಿ ಚಿಣ್ಣಪೀರಯ್ಯ ಸುಲಿಗೆಗೆ ಒಳಗಾದವರು.

ಸೋಮವಾರ ಮುಂಜಾನೆ 3.30ರ ಸುಮಾರಿಗೆ ಚಿಣ್ಣಪೀರಯ್ಯ ಕೆ.ಆರ್‌.ಪುರದ ಬನಶಂಕರಿ ಲೇಔಟ್‌ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಹಿಂಬಾಲಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು, ಚಿಣ್ಣಪೀರಯ್ಯನನ್ನು ಅಡ್ಡಗಟ್ಟಿ ಬೆದರಿಸಿ, ಹಣ ಕೇಳಿದ್ದಾರೆ. ಹಣ ಇಲ್ಲ ಎಂದಾಗ, ಮೊಬೈಲ್‌ನಲ್ಲಿ ಯುಪಿಐ ಮುಖಾಂತರ ₹5 ಸಾವಿರ ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಚಿಣ್ಣಪೀರಯ್ಯ ನೀಡಿದ ದೂರಿನ ಮೇರೆಗೆ ಕೆ.ಆರ್‌.ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ.