ಸಾರಾಂಶ
ಬಲ್ಲೇನಹಳ್ಳಿ ಗ್ರಾಮದ ಹೋಟೆಲ್ ದೇವರಾಜು ಮನೆಯ ಹಿಂಭಾಗದ ಅಡುಗೆ ಮತ್ತು ಸ್ನಾನದ ಕೊಠಡಿಯಲ್ಲಿ ಕಾಣಿಸಿದ ಬೆಂಕಿ ಮೇಲ್ಟಾವಣಿಯವರೆಗೆ ಹಬ್ಬಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವಷ್ಠರಲ್ಲಿ ಗ್ರಾಮಸ್ಥರು ಬೆಂಕಿ ನಂದಿಸಿದ್ದಾರೆ.
ಕೆ.ಆರ್.ಪೇಟೆ : ಮನೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ತಾಲೂಕಿನ ಬಲ್ಲೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಹೋಟೆಲ್ ದೇವರಾಜು ಮನೆಯ ಹಿಂಭಾಗದ ಅಡುಗೆ ಮತ್ತು ಸ್ನಾನದ ಕೊಠಡಿಯಲ್ಲಿ ಕಾಣಿಸಿದ ಬೆಂಕಿ ಮೇಲ್ಟಾವಣಿಯವರೆಗೆ ಹಬ್ಬಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವಷ್ಠರಲ್ಲಿ ಗ್ರಾಮಸ್ಥರು ಬೆಂಕಿ ನಂದಿಸಿದ್ದಾರೆ. ಬೆಂಕಿ ಅವಘಡದಲ್ಲಿ ಫ್ರಿಜ್, ವಾಸಿಂಗ್ ಮೆಷಿನ್ ಮತ್ತು ದಿನಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಘಟನಾ ಸ್ಥಳಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಪರಿಹಾರ ಕೊಡಿಸುವ ಭರವಸೆ ನೀಡಿ, ವೈಯಕ್ತಿಕ ಪರಿಹಾರ ವಿತರಿಸಿದರು. ಗ್ರಾಪಂ ನಂದೀಶ್ ಸೇರಿ ಹಲವರು ಇದ್ದರು.
ಗೂಂಡಾ ಕಾಯ್ದೆಯಡಿ ಜೈಲು ಸೇರಿದ ಮಂಡ್ಯದ ರೌಡಿ
ಮಂಡ್ಯ ಗ್ರಾಮಾಂತರ ಮತ್ತು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಯೊಬ್ಬನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ತಾಲೂಕಿನ ಬಸರಾಳು ಹೋಬಳಿ ಗೂಳಿಕೊಪ್ಪಲು ಗ್ರಾಮದ ಶಶಿಕುಮಾರ್ ಅಲಿಯಾಸ್ ಚಿನ್ನು ಅಲಿಯಾಸ್ ಜಿಂಕೆ (28 ವರ್ಷ) ಜೈಲು ಸೇರಿದವನಾಗಿದ್ದಾನೆ. ಈತ ತನ್ನ ಸಹಚರರೊಂದಿಗೆ ಸತತವಾಗಿ ರೌಡಿ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದನು. ಈತನ ವಿರುದ್ಧ ಕೆರಗೋಡು, ಮಂಡ್ಯ ಗ್ರಾಮಾಂತರ ಮತ್ತು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿದ್ದವು. ಆದಕಾರಣ ಈತನ ರೌಡಿ ಚಟುವಟಿಕೆ ಹಾಗೂ ಉಪಟಳವನ್ನು ನಿಯಂತ್ರಣದಲ್ಲಿಡಲು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಗೂಂಡಾ ಕಾಯ್ದೆಯಡಿ ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.