ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ನಂತಹ ಪ್ರಕರಣಗಳು ಕಂಡು ಬಂದರೆ ಸರ್ಕಾರ ಕಠಿಣ ಕ್ರಮ : ಹೆಬ್ಬಾಳ್ಕರ್‌

| Published : Sep 06 2024, 01:06 AM IST / Updated: Sep 06 2024, 04:06 AM IST

Lakshmi Hebbalkar

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ನಂತಹ ಪ್ರಕರಣಗಳು ಕಂಡು ಬಂದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

 ಬೆಂಗಳೂರು :  ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ನಂತಹ ಪ್ರಕರಣಗಳು ಕಂಡು ಬಂದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಸ್ಟಿಂಗ್‌ ಕೌಚ್‌ನಂತಹ ಘಟನೆಗಳು ಏನಾದರೂ ಆಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು. ಮಹಿಳೆಯರ ರಕ್ಷಣೆಯೇ ನಮಗೆ ಮುಖ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಆ ವಿಚಾರದ ಬಗ್ಗೆ ಭರವಸೆ ನೀಡಿದ್ದಾರೆ. ಮಹಿಳೆಯರ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿದೆ. ಕಾಸ್ಟಿಂಗ್ ಕೌಚ್‌ನಂತಹ ಪ್ರಕರಣಗಳು ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಈ ನಡುವೆ, ಜಿಲ್ಲೆಗಳ ಅಂಗನವಾಡಿ ಶಿಕ್ಷಕಿಯರಿಗೆ ಬಾಕಿ ಉಳಿದಿರುವ ವೇತನವನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುವುದು. ಎಲ್ಲಾ ವಿಚಾರವೂ ಅಂಗನವಾಡಿ ಶಿಕ್ಷಕಿಯರಿಗೆ‌ ಗೊತ್ತಿದೆ. ರಾಜ್ಯ ಸರ್ಕಾರದಿಂದ 7 ಸಾವಿರ ರು., ಕೇಂದ್ರದಿಂದ 4 ಸಾವಿರ ರು. ನೀಡಲಾಗುತ್ತಿದೆ. ಈಗಾಗಲೇ ಕೇಂದ್ರ ಸಚಿವರ ಜೊತೆ ಚರ್ಚೆ ನಡೆಸಲಾಗಿದೆ. ಈ‌ ಹಿಂದೆಯೂ ಹಲವು ಬಾರಿ ವೇತನ ವಿಳಂಬ ಆಗಿದ್ದು, ಗೌರಿ ಗಣೇಶ ಹಬ್ಬದೊಳಗೆ ಹಣ ಬಿಡುಗಡೆಗೆ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.