ಸಾರಾಂಶ
ಮಹಿಳೆಯರ ವಿರುದ್ಧ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ 2022ರಲ್ಲಿ ದೇಶಾದ್ಯಂತ 4.45 ಲಕ್ಷ ಪ್ರಕರಣಗಳು ದಾಖಲಾಗಿವೆ. ಅಂದರೆ ಹತ್ತಿರಹತ್ತಿರ ಪ್ರತಿ ಗಂಟೆಗೆ 51 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋದ ಅಂಕಿಅಂಶಗಳಿಂದ ತಿಳಿದುಬಂದಿದೆ.
ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನಕ್ಕೆ ಮೊದಲ 3 ಸ್ಥಾನ
ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನನವದೆಹಲಿ: ಮಹಿಳೆಯರ ವಿರುದ್ಧ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ 2022ರಲ್ಲಿ ದೇಶಾದ್ಯಂತ 4.45 ಲಕ್ಷ ಪ್ರಕರಣಗಳು ದಾಖಲಾಗಿವೆ. ಅಂದರೆ ಹತ್ತಿರಹತ್ತಿರ ಪ್ರತಿ ಗಂಟೆಗೆ 51 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋದ ಅಂಕಿಅಂಶಗಳಿಂದ ತಿಳಿದುಬಂದಿದೆ.
ಪ್ರಕರಣಗಳು ದಾಖಲಾದ ಪ್ರಮಾಣ ಗಮನಿಸಿದರೆ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು 65,743 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಮಹಾರಾಷ್ಟ್ರ (45,331), ರಾಜಸ್ಥಾನ (45,058), ಪಶ್ವಿಮ ಬಂಗಾಳ (34,738) ಮತ್ತು ಮಧ್ಯಪ್ರದೇ (32,765) ನಂತರದ ಸ್ಥಾನಗಳಲ್ಲಿವೆ. ಕಳೆದ ವರ್ಷ ದೇಶದಲ್ಲಿ 3.71 ಲಕ್ಷ ಪ್ರಕರಣಗಳು ದಾಖಲಾಗಿದ್ದವು.ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳಲ್ಲಿ ಪತಿ ಹಾಗೂ ಆತನ ಕುಟುಂಬದಿಂದ ನಡೆಯುವ ದೌರ್ಜನ್ಯ (ಶೇ.31.4) ಮೊದಲ ಸ್ಥಾನದಲ್ಲಿದೆ. ಉಳಿದಂತೆ ಮಹಿಳೆಯರ ಅಪಹರಣ (ಶೇ.19.2), ಮಾನಭಂಗ (ಶೇ.18.7) ಮತ್ತು ಅತ್ಯಾಚಾರ (ಶೇ.7.1) ನಂತರದ ಸ್ಥಾನಗಳಲ್ಲಿವೆ.