ಮನೆಯಲ್ಲಿ ನೇಣು ಬಿಗಿದುಕೊಂಡು ಬಿಬಿಎಂಪಿ ಮಹಿಳಾ ಟೈಪಿಸ್ಟ್‌ ಆತ್ಮಹತ್ಯೆ : ನಿಖರ ಕಾರಣ ತಿಳಿದು ಬಂದಿಲ್ಲ

| N/A | Published : Feb 25 2025, 02:01 AM IST / Updated: Feb 25 2025, 04:01 AM IST

deadbody
ಮನೆಯಲ್ಲಿ ನೇಣು ಬಿಗಿದುಕೊಂಡು ಬಿಬಿಎಂಪಿ ಮಹಿಳಾ ಟೈಪಿಸ್ಟ್‌ ಆತ್ಮಹತ್ಯೆ : ನಿಖರ ಕಾರಣ ತಿಳಿದು ಬಂದಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯಲ್ಲಿ ನೇಣು ಬಿಗಿದುಕೊಂಡು ಬಿಬಿಎಂಪಿ ಮಹಿಳಾ ಟೈಪಿಸ್ಟ್‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಮನೆಯಲ್ಲಿ ನೇಣು ಬಿಗಿದುಕೊಂಡು ಬಿಬಿಎಂಪಿ ಮಹಿಳಾ ಟೈಪಿಸ್ಟ್‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಾಮರಾಜಪೇಟೆ 1ನೇ ಮುಖ್ಯರಸ್ತೆ ನಿವಾಸಿ ನಂದಿನಿ (34) ಆತ್ಮಹತ್ಯೆಗೆ ಶರಣಾದವರು. ಭಾನುವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದಿರುವಾಗ ಈ ಘಟನೆ ನಡೆದಿದ್ದು, ಪತಿ ಶ್ರೀಕಾಂತ್‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಮರಣಪತ್ರವೂ ಸಿಕ್ಕಿಲ್ಲ. ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ಮೃತ ನಂದಿನಿ ಮತ್ತು ಶ್ರೀಕಾಂತ್‌ 8 ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮೃತ ನಂದಿನಿ ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಡಿ ಟೈಪಿಸ್ಟ್‌ ಕೆಲಸ ಮಾಡುತ್ತಿದ್ದರು. ಭಾನುವಾರ ಸಂಜೆ ನಂದಿನಿ ತಮ್ಮ ಇಬ್ಬರು ಮಕ್ಕಳೊಂದಿಗೆ ಚಾಮರಾಜಪೇಟೆಯಲ್ಲೇ ಇರುವ ತಾಯಿಯ ಮನೆಗೆ ತೆರಳಿದ್ದರು. ಕೆಲ ಹೊತ್ತು ತಾಯಿ ಮನೆಯಲ್ಲಿದ್ದು, ಬಳಿಕ ಮಕ್ಕಳನ್ನು ಅಲ್ಲೇ ಬಿಟ್ಟು ತಮ್ಮ ಮನೆಗೆ ಬಂದಿದ್ದಾರೆ. ಈ ವೇಳೆ ಪತಿ ಶ್ರೀಕಾಂತ್‌ ಹೊರಗೆ ಹೋಗಿದ್ದರು. ಆಗ ನಂದಿನಿ ರೂಮ್‌ನ ಫ್ಯಾನ್‌ ಹುಕ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ರಾತ್ರಿ ಪತಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ನೇಣಿನ ಕುಣಿಕೆಯಿಂದ ನಂದಿನಿಯನ್ನು ಕೆಳಗೆ ಇಳಿಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಈಗಾಗಲೇ ನಂದಿನಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ದಂಪತಿ ನಡುವೆ ಯಾವುದೇ ಗಲಾಟೆ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ಚಾಮರಾಜಪೇಟೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.