ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿ ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ಈವರೆಗೆ ಬರೋಬ್ಬರಿ 276.5 ಮಿ.ಮೀ ನಷ್ಟು ಮಳೆಯಾಗಿದ್ದು, ಇದು ವಾಡಿಕೆ ಪ್ರಮಾಣಕ್ಕಿಂತ ದುಪ್ಪಟ್ಟು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಾಮಾನ್ಯವಾಗಿ ಬೇಸಿಗೆ ಅವಧಿಯ ಮೇ ತಿಂಗಳಿನಲ್ಲಿ 7.5 ದಿನ ಸರಾಸರಿ 128.7 ಮೀ.ಮೀ ಮಳೆಯನ್ನು ಬೆಂಗಳೂರು ನಗರದಲ್ಲಿ ನಿರೀಕ್ಷೆ ಮಾಡಲಾಗುತ್ತದೆ. ಆದರೆ, ಈ ಬಾರಿ ಪೂರ್ವ ಮುಂಗಾರು ಅಬ್ಬರ ಹೆಚ್ಚಾಗಿರುವುದರಿಂದ ನಿರಂತರವಾಗಿ ಮಳೆಯಾದ ಪರಿಣಾಮ ಮೇ ತಿಂಗಳು ಪೂರ್ಣಗೊಳ್ಳುವುದಕ್ಕೆ ಇನ್ನೂ10 ದಿನ ಬಾಕಿ ಇರುವಾಗಲೇ 276.5 ಮಿ.ಮೀ ಮಳೆಯಾಗಿದೆ.ಕಳೆದ ಭಾನುವಾರ ಒಂದೇ ದಿನ ಬರೋಬ್ಬರಿ 132 ಮಿ.ಮೀ ಮಳೆಯಾಗಿದ್ದು, ಇಡೀ ತಿಂಗಳು ಸುರಿಯಬೇಕಾದ ಮಳೆ ಒಂದೇ ದಿನ ಸುರಿದಿದೆ.
2023ರ ಮೇ ತಿಂಗಳಿನಲ್ಲಿ ನಗರದಲ್ಲಿ 305.4 ಮಿ.ಮೀ ಮಳೆಯಾಗಿತ್ತು. ಈವರೆಗೆ ಮೇ ತಿಂಗಳಿನಲ್ಲಿ ಸುರಿದ ಅತ್ಯಧಿಕ ಸಾರ್ವಜಕಾಲಿಕ ದಾಖಲೆ ಮಳೆಯಾಗಿದೆ. ಹೊಸ ಸಾರ್ವಕಾಲಿಕ ದಾಖಲೆ ಬರೆಯುವುದಕ್ಕೆ ಕೇವಲ 28.9 ಮಿ.ಮೀ ಮಳೆ ಬೇಕಾಗಿದೆ. ಅವಧಿಗಿಂತ ಮೊದಲೇ ಮುಂಗಾರು ರಾಜ್ಯ ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಪ್ರಸಕ್ತ ವರ್ಷ ಮೇ ತಿಂಗಳಿನ ಮಳೆ ಸಾರ್ವಕಾಲಿಕ ದಾಖಲೆ ಮಳೆಯಾಗುವ ಸಾಧ್ಯತೆ ಇದೆ.ಇನ್ನೂ ಈಗಾಗಲೇ ಮೇ ನಲ್ಲಿ ಸುರಿದ ಮಳೆಯು ಕಳೆದ 10 ವರ್ಷದಲ್ಲಿ ಸುರಿದ 2ನೇ ಅತಿ ಹೆಚ್ಚು ಮಳೆಯ ಪ್ರಮಾಣವಾಗಿದೆ. 2022ರಲ್ಲಿ 270.2 ಮಿ.ಮೀ ಮಳೆಯಾಗಿತ್ತು. ಆ ದಾಖಲೆಯನ್ನು ಮುರಿದು ಹಾಕಿದೆ.
ಭಾನುವಾರದ ಮಳೆ 10 ವರ್ಷದಲ್ಲಿ ದಾಖಲೆ ಮಳೆಇನ್ನೂ ನಗರದಲ್ಲಿ ಭಾನುವಾರ ಒಂದೇ ಸುರಿದ 132 ಮಿ.ಮೀ ಮಳೆಯು ಕಳೆದ 10 ವರ್ಷದ ದಾಖಲೆಯ ಮಳೆಯಾಗಿದೆ. 2022ರ ಮೇ 18 ರಂದು ನಗರದಲ್ಲಿ 114 .6 ಮಿ.ಮೀ ಮಳೆಯಾಗಿತ್ತು. ಅದಕ್ಕಿಂತ ಹೆಚ್ಚಿನ ಪ್ರಮಾಣದ ಮಳೆ ಭಾನುವಾರ ನಗರದಲ್ಲಿ ಆಗಿದೆ. ಇನ್ನೂ 1909ರ ಮೇನಲ್ಲಿ 153.9 ಮಿ.ಮ ಮಳೆಯಾಗಿದ್ದು, ಅದು ಬೆಂಗಳೂರಿನಲ್ಲಿ ಮೇನಲ್ಲಿ 24 ಗಂಟೆಯಲ್ಲಿ ಸುರಿದ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕಳೆದ 10 ವರ್ಷದ ಮಳೆ ವಿವರ (ಮಿ.ಮೀ)ವರ್ಷ24 ಗಂಟೆಮೇ ತಿಂಗಳು
2024 ಮೇ 1930.3181.52023 ಮೇ 3165.2305.42022 ಮೇ 18114.6270.22021ಮೇ 1335.0130.72020ಮೇ 2535.9129.12019 ಮೇ 137.8155.32018 ಮೇ 1149.5239.82017ಮೇ2783.4241.92016ಮೇ 746.6140.62015 ಮೇ 1766.4178.4