ರಸ್ತೆ ದಾಟುತ್ತಿದ್ದ ವೇಳೆ ಮೋಟಾರ್ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಹಲಗೂರುಸಮೀಪದ ದಳವಾಯಿ ಕೋಡಿಹಳ್ಳಿಯಲ್ಲಿ ನಡೆದಿದೆ.
ಹಲಗೂರು:
ರಸ್ತೆ ದಾಟುತ್ತಿದ್ದ ವೇಳೆ ಮೋಟಾರ್ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಸಮೀಪದ ದಳವಾಯಿ ಕೋಡಿಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.ಗ್ರಾಮದ ನವೀನ್ ಕುಮಾರ್ ಅವರ ಪುತ್ರಿ ದಿಕ್ಷೀತಾ (8) ಮೃತ ಬಾಲಕಿ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ದಿಕ್ಷೀತಾ ಡಿ.3ರಂದು ಬುಧವಾರ ಶಾಲೆ ಮುಗಿಸಿ ಮನೆಗೆ ಮರಳಲು ರಸ್ತೆ ದಾಟುತ್ತಿದ್ದಾಗ ಹಲಗೂರು ಕಡೆಯಿಂದ ಕನಕಪುರ ಕಡೆಗೆ ತೆರಳುತ್ತಿದ್ದ ಮೋಟಾರ್ ಬೈಕ್ ಡಿಕ್ಕಿಯಾಗಿದೆ. ಗಾಯಗೊಂಡ ದಿಕ್ಷೀತಾ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪರಿಚಿತ ವ್ಯಕ್ತಿಯ ಶವ ಪತ್ತೆ
ಮಂಡ್ಯ: ಹನಕೆರೆ-ಮದ್ದೂರು ರೈಲು ನಿಲ್ಧಾಣಗಳ ನಡುವೆ ರೈಲುಗಾಡಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತ ಪಟ್ಟಿದ್ದು, ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ಗಂಡಸಿಗೆ ಸುಮಾರು 50 ವರ್ಷವಾಗಿದೆ. 5.1 ಅಡಿ ಎತ್ತರ, ಧೃಡಕಾಯ ಶರೀರ, ಬಿಳಿ ಮೈಬಣ್ಣ, ದುಂಡನೇಯ ಮುಖ, ತಲೆಯಲ್ಲಿ ಸುಮಾರು 1 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು ಹೊಂದಿದ್ದು, ಕಪ್ಪು ಬಣ್ಣದ ಹೂವಿನ ಚಿತ್ರವಿರುವ ಫುಲ್ ಶರ್ಟ್, ಬಿಲಿ ಬಣ್ಣದ ಬನಿಯನ್, ಕಪ್ಪು ಬಣ್ಣದ ಪ್ಯಾಂಟ್, ಮೆರೂನ್ ಬಣ್ಣದ ಅಂಡರ್ ವೇರ್, ಕಪ್ಪು ಮತ್ತು ಬ್ರೌನ್ ಮಿಶ್ರೀತ ಬೆಲ್ಟ್ ಹಾಗೂ ಎಡಗೈಯಲ್ಲಿ ಚಿನ್ನದಂತೆ ಹೋಲುವ ಬಣ್ಣವಿರುವ ಕಲ್ಲಿನ ಉಂಗುರ ಧರಿಸಿದ್ದಾನೆ. ವಾರಸುದಾರರಿದ್ದಲ್ಲಿ ದೂ: 0821-2516579 / ಮೊ-9480802122 ಅನ್ನು ಸಂಪರ್ಕಿಸಲು ರೈಲ್ವೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.