3 ಪ್ರತಿಷ್ಠಿತ ಇಂಜಿನಿಯರಿಂಗ್‌ ಕಾಲೇಜಿಗೆ ಇ-ಮೇಲ್‌ ಸಂದೇಶದ ಬಾಂಬ್‌ ಬೆದರಿಕೆ : ಆತಂಕದ ವಾತಾವರಣ ಸೃಷ್ಟಿ

| Published : Oct 05 2024, 01:31 AM IST / Updated: Oct 05 2024, 05:00 AM IST

bomb threat

ಸಾರಾಂಶ

ಕಿಡಿಗೇಡಿಗಳು ನಗರದ 3 ಪ್ರತಿಷ್ಠಿತ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಶುಕ್ರವಾರ ಬಾಂಬ್ ಬೆದರಿಕೆ ಇ-ಮೇಲ್‌ ಸಂದೇಶ ಕಳುಹಿಸಿದ್ದ ಹಿನ್ನೆಲೆಯಲ್ಲಿ ಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಜರುಗಿದೆ.

 ಬೆಂಗಳೂರು : ಕಿಡಿಗೇಡಿಗಳು ನಗರದ 3 ಪ್ರತಿಷ್ಠಿತ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಶುಕ್ರವಾರ ಬಾಂಬ್ ಬೆದರಿಕೆ ಇ-ಮೇಲ್‌ ಸಂದೇಶ ಕಳುಹಿಸಿದ್ದ ಹಿನ್ನೆಲೆಯಲ್ಲಿ ಕಾಲಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಜರುಗಿದೆ.

ಸತ್ತನಾಥಪುರ ವಿ ಶೇಖರ್‌ ಹೆಸರಿನ ಇ-ಮೇಲ್‌ ಐಡಿಯಿಂದ ಈ 3 ಇಂಜಿನಿಯರಿಂಗ್‌ ಕಾಲೇಜುಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ ಬಂದಿದೆ. ಈ ಕಾಲೇಜುಗಳಿಗೆ ಹೈಡ್ರೋಜನ್‌ಯುಕ್ತ ಸುಧಾರಿತ ಸ್ಫೋಟ ಸಾಧನ(ಐಇಡಿ) ಅಳವಡಿಸಲಾಗಿದೆ. ಇಂದು ಸಂಜೆ 5 ಗಂಟೆಯೊಳಗೆ ಕಾಲೇಜಿನಿಂದ ಹೊರಗೆ ಹೋಗುವಂತೆ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ. ಮಧ್ಯಾಹ್ನ ಸುಮಾರು 1 ಗಂಟೆಗೆ ಈ ಇಮೇಲ್‌ ಗಮನಿಸಿದ ಮೂರು ಕಾಲೇಜುಗಳ ಆಡಳಿತ ಮಂಡಳಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

1 ತಾಸು ತಪಾಸಣೆ:

ಇದರ ಬೆನ್ನಲ್ಲೇ ಪೊಲೀಸರು, ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನದ ದಳದ ಸಿಬ್ಬಂದಿ ಕಾಲೇಜುಗಳಿಗೆ ದೌಡಾಯಿಸಿ, ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜಿನೊಳಗೆ ಇದ್ದವರನ್ನು ಹೊರಗೆ ಕಳುಹಿಸಿದ್ದಾರೆ. ಬಳಿಕ ಕಾಲೇಜುಗಳ ಒಳ ಹಾಗೂ ಹೊರ ಆವರಣವನ್ನು ಸುಮಾರು 1 ತಾಸಿಗೂ ಅಧಿಕ ಕಾಲ ಇಂಚಿಂಚೂ ತಪಾಸಣೆ ನಡೆಸಿದ್ದಾರೆ. ಈ ವೇಳೆ ಯಾವುದೇ ಸ್ಫೋಟಕ ಸಾಮಗ್ರಿಗಳು, ಬಾಂಬ್‌ಗಳು, ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

ಮೂರು ಪ್ರತ್ಯೇಕ ಎಫ್‌ಐಆರ್‌ ದಾಖಲು: ಈ ಸಂಬಂಧ ಹನುಮಂತನಗರ, ಸದಾಶಿವನಗರ ಹಾಗೂ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದ್ದು, ಹುಸಿ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಿಎಂಎಸ್‌, ಬಿಐಟಿ ಸೇರಿದಂತೆ ಮೂರು ಇಂಜಿನಿಯರಿಂಗ್ ಕಾಲೇಜುಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ ಬಂದಿದೆ. ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳದ ಸಿಬ್ಬಂದಿ ತಪಾಸಣೆ ನಡೆಸಿದ್ದು, ಹುಸಿ ಬಾಂಬ್‌ ಬೆದರಿಕೆ ಎಂಬುದು ಖಚಿತವಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ.

-ಲೋಕೇಶ್‌ ಭರಮಪ್ಪ ಜಗಲಾಸಾರ್‌, ದಕ್ಷಿಣ ವಿಭಾಗದ ಡಿಸಿಪಿ

 ಬಸವನಗುಡಿ ರಸ್ತೆಯ ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜು, ಎಂಎಸ್‌ಆರ್‌ ನಗರದ ಎಂ.ಎಸ್‌.ರಾಮಯ್ಯ ಇಂಜಿನಿಯರಿಂಗ್‌ ಕಾಲೇಜು ಹಾಗೂ ಬಸವನಗುಡಿಯ ಬೆಂಗಳೂರು ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(ಬಿಐಟಿ) ಕಾಲೇಜುಗಳಿಗೆ