ಆಸ್ತಿಗಾಗಿ ಸಹೋದರರನ್ನು ದಾರುಣವಾಗಿ ಸಿನಿಮಾ ಶೈಲಿಯಲ್ಲಿ ಮಚ್ಚಿನಿಂದ ನಿಂದ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಕೆ.ಆರ್.ನಗರ ತಾಲೂಕಿನ ಅರ್ಜುನಹಳ್ಳಿಯಲ್ಲಿ ನಡೆದಿದೆ. ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ವಾಸವಾಗಿದ್ದ ಡಿಸ್ಕವರಿ ರಾಘು (35), ಹರ್ಷವರ್ಧನ್ (30) ಹತ್ಯೆಯಾದ ಸಹೋದರರು.

ಕೆ.ಆರ್. ನಗರ : ಆಸ್ತಿಗಾಗಿ ಸಹೋದರರನ್ನು ದಾರುಣವಾಗಿ ಸಿನಿಮಾ ಶೈಲಿಯಲ್ಲಿ ಮಚ್ಚಿನಿಂದ ನಿಂದ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಅರ್ಜುನಹಳ್ಳಿಯಲ್ಲಿ ನಡೆದಿದೆ.

ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ವಾಸವಾಗಿದ್ದ ಡಿಸ್ಕವರಿ ರಾಘು (35), ಹರ್ಷವರ್ಧನ್ (30) ಹತ್ಯೆಯಾದ ಸಹೋದರರು.

ಜೋಡಿ ಕೊಲೆ

ಕೊಲೆಯಾದ ಇಬ್ಬರು ಯುವಕರು ಅರ್ಜುನಹಳ್ಳಿ ಗ್ರಾಮದ ರಮೇಶ್ ರಾಜು ಅವರ ಕಿರಿಯ ಹೆಂಡತಿಯ ಮಕ್ಕಳಾಗಿದ್ದು, ತಂದೆಯ ಆಸ್ತಿಗಾಗಿ ಮತ್ತು ಹಳೆಯ ವೈಷಮ್ಯಕ್ಕೆ ಸಂಬಂಧಿಸಿದಂತೆ ಜೋಡಿ ಕೊಲೆ ನಡೆದಿದೆ.

ಅರ್ಜುನಹಳ್ಳಿ ಗ್ರಾಮದ ರಮೇಶ್ ರಾಜು ಎಂಬವರಿಗೆ ಇಬ್ಬರು ಹೆಂಡತಿಯರು ಮೊದಲನೇಹೆಂಡತಿ ಸುಧಾ ಎಂಬುವರು ಇನ್ನೋರ್ವ ಹೆಂಡತಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಮೂಲದ ಶಿಕ್ಷಕಿ ಕಾಮಾಕ್ಷಿ ಎನ್ನಲಾಗಿದೆ.

ತಂದೆ ರಮೇಶ್ ರಾಜ್ ಅವರನ್ನು ಮೂರು ವರ್ಷಗಳ ಹಿಂದೆ ಬರ್ಬರ ಹತ್ಯೆ

ಈಗ್ಗೆ ಎರಡ್ಮೂರು ವರ್ಷಗಳ ಹಿಂದೆ ರಮೇಶ್ ರಾಜು ಅವರ ಎರಡನೇ ಹೆಂಡತಿ ಕಾಮಾಕ್ಷಿ ಶಿಕ್ಷಕಿಯಾಗಿ ನಿವೃತ್ತಿ ಹೊಂದಿ ಶ್ರೀರಂಗಪಟ್ಟಣದಲ್ಲಿ ನೆಲಸಿದ್ದರು ಎನ್ನಲಾಗಿದ್ದು, ನಿವೃತ್ತ ಶಿಕ್ಷಕಿ ಕಾಮಾಕ್ಷಿ ಅವರಿಗೆ ಹಿರಿಯ ಮಗ ಡಿಸ್ಕವರಿ ರಾಘು, ದ್ವಿತೀಯ ಪುತ್ರ ಹರ್ಷವರ್ಧನ ಎಂಬ ಮಕ್ಜಳಿದ್ದಾರೆ. ಈ ಪೈಕಿ ಡಿಸ್ಕವರಿ ರಾಘು ತಂದೆಯ ಆಸ್ತಿಗಾಗಿ ಅರ್ಜುನಹಳ್ಳಿ ತೋಟದ ಮನೆಯಲ್ಲಿ ತಂದೆ ರಮೇಶ್ ರಾಜ್ ಅವರನ್ನು ಮೂರು ವರ್ಷಗಳ ಹಿಂದೆ ಬರ್ಬರ ಹತ್ಯೆ ಮಾಡಿ ಜೈಲು ಸೇರಿದ್ದ ಎನ್ನಲಾಗಿದೆ.

ಲೇಟ್ ರಮೇಶ್ ರಾಜು ಅವರ ಮೊದಲನೇ ಪತ್ನಿ ಸುಧಾ ಅವರ ಮಗ ರೋಹಿತ್ ಆಸ್ತಿಯ ವಿಚಾರವಾಗಿ ರಾಜಿ ಪಂಚಾಯತಿಗಾಗಿ ತನ್ನ ತಂದೆಯ ಕಿರಿ ಹೆಂಡತಿ ಕಾಮಾಕ್ಷಿ ಮಕ್ಕಳಾದ ಡಿಸ್ಕವರಿ ರಾಘು ಹಾಗೂ ಹರ್ಷವರ್ಧನ್ ಇಬ್ಬರನ್ನು ಅರ್ಜುನಹಳ್ಳಿ ಗ್ರಾಮಕ್ಕೆ ಕರೆಸಿದ್ದರು ಎನ್ನಲಾಗಿದೆ. ಆಸ್ತಿ ಹಂಚಿಕೊಳ್ಳುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದ್ದು, ಏಕಾಏಕಿ ಮಚ್ಚಿನಿಂದ ರೋಹಿತ್ ಈ ಇಬ್ಬರು ಸೋಹದರರ ಮೇಲೆ ಮನಸ್ಸೊ ಇಚ್ಚೆ ಬಂದಂತೆ ತಲೆ ಹಾಗೂ ಮುಖದ ಮೇಲೆ ಕೊಚ್ಚಿದ್ದಾನೆ, ಸ್ಥಳದಲ್ಲಿ ಹರ್ಷವರ್ಧನ್ ಮೃತಪಟ್ಟನು, ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಡಿಸ್ಕವರಿ ರಾಘುನನ್ನು ಬೆನ್ನತ್ತಿದ್ದ ರೋಹಿತ್ ಕಲ್ಯಾಣಪುರ ಸಮೀಪ ರಸ್ತೆಯ ಬದಿಯಲ್ಲಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಕೆ.ಆರ್.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಹತ್ಯೆಯಾದ ಇಬ್ಬರು ಯುವಕರ ಶವಗಳನ್ನು ಪರಿಶೀಲಿಸಿದರು. ಈ ಸಂಬಂಧ ಹತ್ಯೆಗೈದ ಆರೋಪಿ ರೋಹಿತ್ ನನ್ನು ಜಮೀನಿನ ಬಳಿ ಬಂಧಿಸಿದ ಪೊಲೀಸರು, ಆರೋಪಿ ರೋಹಿತ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪೊಲೀಸ್ ವಶಕ್ಕೆಪಡೆಯಲಾಗಿದೆ.