ಶಾಲಾ ದಾಖಲಾತಿಗಾಗಿ ಪಾಲಿಕೆಯಲ್ಲಿ ಜನನ ಪ್ರಮಾಣ ಪತ್ರ ತಿದ್ದುಪಡಿ ದಂದೆ

| Published : May 15 2024, 01:35 AM IST / Updated: May 16 2024, 06:10 AM IST

ಶಾಲಾ ದಾಖಲಾತಿಗಾಗಿ ಪಾಲಿಕೆಯಲ್ಲಿ ಜನನ ಪ್ರಮಾಣ ಪತ್ರ ತಿದ್ದುಪಡಿ ದಂದೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಇಲಾಖೆಯು 2024-25ನೇ ಸಾಲಿನಿಂದ ಎಲ್‌ಕೆಜಿ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿರಬೇಕು, 2025-26ನೇ ಸಾಲಿನಿಂದ 1ನೇ ತರಗತಿ ಪ್ರವೇಶಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮ ರೂಪಿಸಿರುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಕ್ಕಳ ಜನನ ಪ್ರಮಾಣ ಪತ್ರಗಳ ತಿದ್ದುಪಡಿಗೆ ದೊಡ್ಡ ದಂದೆ ನಡೆಯುತ್ತಿದೆ  

 ಬೆಂಗಳೂರು :  ಶಿಕ್ಷಣ ಇಲಾಖೆಯು 2024-25ನೇ ಸಾಲಿನಿಂದ ಎಲ್‌ಕೆಜಿ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿರಬೇಕು, 2025-26ನೇ ಸಾಲಿನಿಂದ 1ನೇ ತರಗತಿ ಪ್ರವೇಶಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮ ರೂಪಿಸಿರುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಕ್ಕಳ ಜನನ ಪ್ರಮಾಣ ಪತ್ರಗಳ ತಿದ್ದುಪಡಿಗೆ ದೊಡ್ಡ ದಂದೆ ನಡೆಯುತ್ತಿದೆ ಎಂದು ಕ್ಯಾಮ್ಸ್‌, ಕುಸ್ಮಾ, ಮಿಕ್ಸಾ ಸೇರಿದಂತೆ ವಿವಿಧ ಶಾಲಾ ಸಂಘಟನೆಗಳು ಆರೋಪಿಸಿವೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌, ಎಲ್‌ಕೆಜಿ ದಾಖಲಾತಿಗೆ 2024ರ ಜೂನ್‌ 1ಕ್ಕೆ 4 ವರ್ಷ ಪೂರ್ಣಗೊಂಡಿರಬೇಕು. ಅದೇ ರೀತಿ ಮುಂದಿನ 2025ನೇ ಸಾಲಿನಲ್ಲಿ 1ನೇ ತರಗತಿಗೆ ದಾಖಲಾತಿ ಬಯಸುವ ಮಗುವಿಗೆ ಮುಂದಿನ ವರ್ಷ ಜೂ.1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕು.

ಸರ್ಕಾರದ ನಿಯಮದ ಪ್ರಕಾರ ಒಂದು ದಿನ ಅಂದರೆ ಮೇ 30ರಂದು ಮಗು ಜನಿಸಿದ್ದರೂ ಆ ಮಕ್ಕಳಿಗೆ ದಾಖಲಾತಿ ಸಿಗುವುದಿಲ್ಲ. ಸರ್ಕಾರ ನಿಗದಿಪಡಿಸಿರುವ ವಯೋಮಿತಿಗೆ ಕೆಲ ದಿನ, ತಿಂಗಳು ಕಡಿಮೆ ಆಗುತ್ತಿರುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಜನನ ಪ್ರಮಾಣ ಪತ್ರವನ್ನೇ ತಿದ್ದುಪಡಿ ಮಾಡಿಸುತ್ತಿದ್ದಾರೆ. ಇದಕ್ಕೆ ಬಿಬಿಎಂಪಿಯಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ. ₹500 ನೀಡಿದರೆ ಪೋಷಕರು ಹೇಳಿದ ದಿನಾಂಕದಂದು ಮಗು ಜನಿಸಿದೆ ಎಂದು ಹೊಸ ಜನನ ಪ್ರಮಾಣ ಪತ್ರ ನೀಡಿ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರಲ್ಲದೆ, ಇದಕ್ಕೆ ಕೆಲ ಮಕ್ಕಳ ಪೋಷಕರು ಜನನ ಪ್ರಮಾಣ ಪತ್ರ ತಿದ್ದುಪಡಿ ಮಾಡಿರುವ ದಾಖಲೆಗಳನ್ನೂ ಬಹಿರಂಗಪಡಿಸಿದರು. ಸರ್ಕಾರ ಹಾಗೂ ಬಿಬಿಎಂಪಿ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.