ಸಾರಾಂಶ
ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ಅಜಯ್, ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಕರ ವಸೂಲಿ ಮಾಡಿಕೊಂಡು ಬೆಳಗ್ಗೆ 11:45ರ ಸಮಯದಲ್ಲಿ ಕಚೇರಿಗೆ ಹಿಂದಿರುಗಿದ್ದರು. ಇದ್ದಕ್ಕಿದ್ದಂತೆ ತಲೆ ಸುತ್ತು ತಿರುಗಿ ಕುಸಿದಿದ್ದಾರೆ.
ಹಲಗೂರು : ಕುಸಿದು ಬಿದ್ದು ಬಿಲ್ ಕಲೆಕ್ಟರ್ ಮೃತಪಟ್ಟಿರುವ ಘಟನೆ ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಶುಕ್ರವಾರ ನಡೆದಿದೆ.
ಬಿಲ್ ಕಲೆಕ್ಟರ್ ಅಜಯ್ (34) ಮೃತಪಟ್ಟವರು. ಶುಕ್ರವಾರ ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ಅಜಯ್, ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಕರ ವಸೂಲಿ ಮಾಡಿಕೊಂಡು ಬೆಳಗ್ಗೆ 11:45ರ ಸಮಯದಲ್ಲಿ ಕಚೇರಿಗೆ ಹಿಂದಿರುಗಿದ್ದರು.
ಇದ್ದಕ್ಕಿದ್ದಂತೆ ತಲೆ ತಿರುಗಿ ಕುಸಿದಿದ್ದಾರೆ. ಈ ವೇಳೆ ಕಚೇರಿ ಸಿಬ್ಬಂದಿ ತಕ್ಷಣ ಖಾಸಗಿ ವಾಹನದಲ್ಲಿ ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.