ಸಾರಾಂಶ
ಶ್ರೀರಂಗಪಟ್ಟಣ : ಸಾರಿಗೆ ಬಸ್ ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಬಸ್‌ಗೆ ಹಾನಿ ಮಾಡಿದವನ್ನು ಪೊಲೀಸರು ಬಂಧಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಎ 42, ಎಫ್ 1916 ನಂಬರಿನ 313 ಮಾರ್ಗದ ಬಸ್‌ಗೆ ತುಮಕೂರು ಮೂಲದ ಮುಸ್ಲಿಂರ ಕುಟುಂಬದವರು ಮೈಸೂರಿಗೆ ತೆರಳಲು ಹತ್ತಿದ್ದಾರೆ. ಆದರೆ, ಆ ಬಸ್ ಗಂಜಾಂ ಮಾರ್ಗದಿಂದ ಹೊರಡುತ್ತಿದ್ದಂತೆ ಬಸ್ಸನ್ನು ನಿಲ್ಲಿಸುವಂತೆ ಕೂಗಿದ್ದಾರೆ.
ಹೆದ್ದಾರಿ ಇದ್ದುದ್ದರಿಂದ ಬಸ್ ಚಾಲಕ ಸ್ವಲ್ಪ ಮುಂದೆ ತೆರಳಿ ಬಸ್ ನಿಲ್ಲಿಸುತ್ತಿದ್ದಂತೆ ಫೈರೋಜ್ ಎಂಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಧಿಸಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಆತನ ಮಕ್ಕಳು ಸಹ ಚಾಲಕನ ಮೇಲೆ ನಡೆಸಿ ಕಲ್ಲಿನಿಂದ ಬಸ್ಸಿನ ಗಾಜು ಹೊಡೆದು ಹಾಕಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಸ್ಥಳಿಯರು ಹೆಚ್ಚಿನ ಘಟನೆ ನಡೆಯದಂತೆ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಬಸ್ಸಿನ ಗಾಜು ಜಖಂಗೊಂಡಿದೆ. ಬಸ್ ಚಾಲಕ ಮಹೇಶ್ ಅವರಿಗೆ ಸಣ್ಣ-ಪುಟ್ಟ ಗಾಯವಾಗಿದೆ.
ಚಾಲಕ ಹಾಗೂ ನಿರ್ವಾಹಕ ಶಿವಪುತ್ರಪ್ಪ ಹಲ್ಲೆ ನಡೆಸಿದವರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲ್ಲೆ ನಡೆಸಿದವರನ್ನು ಬಂಧಿಸಿ ಠಾಣೆಗೆ ಕರೆದೊಯ್ದು ತನಿಖೆ ನಡೆಸಿದ್ದಾರೆ.
ನವಜಾತ ಹೆಣ್ಣು ಮಗು ಪತ್ತೆ
ಮಂಡ್ಯ: ನಾಗಮಂಗಲದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ 6 ದಿನದ ನವಜಾತ ಹೆಣ್ಣು ಮಗು ಪತ್ತೆಯಾಗಿದ್ದು, ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ. ಮಗುವಿನ ಪೋಷಕರು ಇದ್ದಲ್ಲಿ ಪತ್ರಿಕೆಯಲ್ಲಿ ಪ್ರಕಟಣೆಯಾದ 60 ದಿನಗಳೊಳಗೆ ಮಗುವಿಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಮರೀಗೌಡ ಬಡಾವಣೆಯ ಮಕ್ಕಳ ಕಲ್ಯಾಣ ಸಮಿತಿ ಬಾಲಕರ ಬಾಲಮಂದಿರಕ್ಕೆ ಭೇಟಿ ನೀಡಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ-08232-220743 ಅನ್ನು ಸಂಪರ್ಕಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.