ದಾವೂದ್ ಬಂಟನ ಜತೆ ಠಾಕ್ರೆ ಸೇನೆ ಶಾಸಕ ಇರುವ ಕುರಿತು ತನಿಖೆಗೆ ಮಹಾ ಸರ್ಕಾರ ಆದೇಶ

| Published : Dec 16 2023, 02:00 AM IST

ದಾವೂದ್ ಬಂಟನ ಜತೆ ಠಾಕ್ರೆ ಸೇನೆ ಶಾಸಕ ಇರುವ ಕುರಿತು ತನಿಖೆಗೆ ಮಹಾ ಸರ್ಕಾರ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬೈ: ಭಾರತದ ಮೋಸ್ಟ್‌ ವಾಂಟೆಡ್ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಸಹಚರನಾದ ಸಲೀಂ ಕುತ್ತಾನೊಂದಿಗೆ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಶಾಸಕ ಸುಧಾಕರ್‌ ಬಡ್‌ಗುಜರ್ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ನಿತೇಶ್‌ ರಾಣೆ ಗಂಭೀರ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವೀಸ್‌ ಆದೇಶಿಸಿದ್ದಾರೆ.

1993ರ ಮುಂಬೈ ಸ್ಫೋಟ ಪ್ರಕರಣದ ಅಪರಾಧಿ ಸಲೀಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಪೆರೋಲ್‌ ಮೇಲೆ ಆತ ಆಚೆ ಬಂದಿದ್ದಾನೆ. ಈ ವೇಳೆ ಸುಧಾಕರ್‌ ಸಲೀಂಗಾಗಿ ಔತಣ ಏರ್ಪಡಿಸಿದ್ದರು ಎಂದು ಬಿಜೆಪಿ ಆರೋಪಿಸಿದೆ. ಸಲೀಂ ಮತ್ತು ಸುಧಾಕರ್‌ ಜೊತೆಗಿರುವ ಫೋಟೋ ವೈರಲ್‌ ಆಗಿದೆ.