ಸಾರಾಂಶ
ಜಮಿನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತಿದ್ದ ವೇಳೆ ಸಾರಿಗೆ ಬಸ್ ಡಿಕ್ಕಿಯಾಗಿ ಒಂದೆ ಕುಟುಂಬದ ನಾಲ್ಕು ಜನ ಕೂಲಿ ಕಾರ್ಮಿಕರು ಸಾವನಪ್ಪಿದ ಘಟನೆ ಸೋಮವಾರ ಸಂಜೆ ಬೀದರ್‌ನ ತೆಲಂಗಾಣಾ ಗಡಿಯಲ್ಲಿ ಜರುಗಿದೆ.
ಬೀದರ್: ಜಮಿನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತಿದ್ದ ವೇಳೆ ಸಾರಿಗೆ ಬಸ್ ಡಿಕ್ಕಿಯಾಗಿ ಒಂದೆ ಕುಟುಂಬದ ನಾಲ್ಕು ಜನ ಕೂಲಿ ಕಾರ್ಮಿಕರು ಸಾವನಪ್ಪಿದ ಘಟನೆ ಸೋಮವಾರ ಸಂಜೆ ಬೀದರ್‌ನ ತೆಲಂಗಾಣಾ ಗಡಿಯಲ್ಲಿ ಜರುಗಿದೆ.
ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಗಣೇಶಪುರ ಗ್ರಾಮದ ಮೂಲದವರಾಗಿದ್ದ ನಾಲ್ಕು ಜನರು ಕೆಲಸ ಮುಗಿಸಿಕೊಂಡು ಇಬ್ಬರು ಬೈಕ್ ಮೇಲಿದ್ದರೆ ಇನ್ನಿಬ್ಬರು ನಡೆದುಕೊಂಡು ಹೋಗುತಿದ್ದಾಗ ಹೈದ್ರಾಬಾದ್‌ನಿಂದ ಔರಾದ್‌ಗೆ ತೆರಳುವ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ.
ಬೀದರ್‌ನ ಗಡಿ ಭಾಗದ ಗಣೇಶಪೂರ ವಾಡಿ ಕಮಾನ ಬಳಿ ಘಟನೆ ನಡೆದಿದ್ದು, ಪತಿ, ಪತ್ನಿ, ಮಗ ಹಾಗೂ ಮಾವ ಸೇರಿ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಪಟ್ಟವರಲ್ಲಿ ಜಗನ್ನಾಥ (35), ರೇಣುಕಾ (34), ವಿನೋದ್ ಕುಮಾರ್ (14) ಹಾಗೂ ಮತ್ತೋರ್ವ ರೇಣುಕಾ ಅವರ ತಂದೆಯಾಗಿದ್ದಾರೆ ಎಂದು ಹೇಳಲಾಗಿದೆ.
ನಾಲ್ಕು ಮೃತ ದೆಹಗಳನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ತರಲಾಗಿತ್ತು, ಆಸ್ಪತ್ರೆ ಬಳಿ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಘಟನೆ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.