ಸಾರಾಂಶ
ವಾಹನದಲ್ಲಿದ್ದ 90 ರಟ್ಟಿನ ಪೆಟ್ಟಿಗೆಯಲ್ಲಿ 50 ಎಂಎಲ್ ಅಳತೆಯ ಬ್ಲೆಂಡರ್ಸ್ ಸ್ಪ್ರೈಡ್ ವಿಸ್ಕಿ ಬಾಟಲಿಗಳು, 04 ಪ್ಲಾಸ್ಟಿಕ್ ಕ್ಯಾನ್ ನಲ್ಲಿ 80ಲೀ ಬ್ಲೆಂಡ್ ವಿಸ್ಕಿ, ಒಂದು ಚೀಲದಲ್ಲಿ ರಾಯಲ್ ಸ್ಪ್ಯಾಗ್ ವಿಸ್ಕಿಯ ಕ್ಯಾಪ್ ಗಳು ಪತ್ತೆಯಾಗಿವೆ.
ಕನ್ನಡಪ್ರಭ ವಾರ್ತೆ ಬೆಳಗಾವಿಗೋವಾ ಮದ್ಯವನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಣೆ ಮಾಡುತ್ತಿದ್ದ ವಾಹನ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಓರ್ವನನ್ನು ಬಂಧಿಸಿ, ₹ 40 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಬಿಹಾರ ರಾಜ್ಯದ ಬಂಗಾ ಬಝಾರ್ ನಿವಾಸಿ ಸುಭೋದ ರಾಮನಾಥ ಮಹತೊ (49) ಬಂಧಿತ ಆರೋಪಿ. ಕ್ಯಾಂಟರ್‌ನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಣೆ ಮಾಡುತ್ತಿರುವ ಕುರಿತು ಮಾಹಿತಿ ಕಲೆ ಹಾಕಿದ್ದ ಅಬಕಾರಿ ಅಧಿಕಾರಿಗಳು, ಶುಕ್ರವಾರ ಬೆಳಗ್ಗೆ 4.30 ಗಂಟೆಯ ಸುಮಾರಿಗೆ ಖಾನಾಪುರ ತಾಲೂಕಿನ ಕಣಕುಂಬಿ ಚೆಕ್ ಪೊಸ್ಟ್‌ನಲ್ಲಿ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕ್ಯಾಂಟರ್ ನಲ್ಲಿ ಗೋವಾ ಮದ್ಯ ಇರುವುದು ಖಚಿತವಾಗುತ್ತಿದ್ದಂತೆ ವಾಹನ ಚಾಲಕ ಸುಭೋಧ ಮೆಹತೊನನ್ನು ಬಂಧಿಸಿದ್ದಾರೆ. ವಾಹನದ ಮಾಲೀಕನ ಬಂಧನಕ್ಕೆ ಅಬಕಾರಿ ಅಧಿಕಾರಿಗಳು ಬಲೆ ಬೀಸಿದ್ದಾರೆ.ವಾಹನದಲ್ಲಿದ್ದ 90 ರಟ್ಟಿನ ಪೆಟ್ಟಿಗೆಯಲ್ಲಿ 50 ಎಂಎಲ್ ಅಳತೆಯ ಬ್ಲೆಂಡರ್ಸ್ ಸ್ಪ್ರೈಡ್ ವಿಸ್ಕಿ ಬಾಟಲಿಗಳು, 04 ಪ್ಲಾಸ್ಟಿಕ್ ಕ್ಯಾನ್ ನಲ್ಲಿ 80ಲೀ ಬ್ಲೆಂಡ್ ವಿಸ್ಕಿ, ಒಂದು ಚೀಲದಲ್ಲಿ ರಾಯಲ್ ಸ್ಪ್ಯಾಗ್ ವಿಸ್ಕಿಯ ಕ್ಯಾಪ್ ಗಳು ಪತ್ತೆಯಾಗಿವೆ. ದಾಳಿಯಲ್ಲಿ ₹ 15 ಲಕ್ಷ ಮೌಲ್ಯದ ವಾಹನ ಹಾಗೂ 25,00,200 ಮೌಲ್ಯದ ವಿವಿಧ ಮದ್ಯ ಸೇರಿದಂತೆ ಒಟ್ಟು ₹ 4000200 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.ಅಬಕಾರಿ ಅಪರ ಆಯುಕ್ತ ಡಾ. ವೈ.ಮಂಜುನಾಥ, ಜಂಟಿ ಆಯುಕ್ತ ಫಿರೋಜಖಾನ ಕಿಲ್ಲೇದಾರ, ಉಪಾಯುಕ್ತೆ ವನಜಾಕ್ಷಿ ಎಂ., ಅಬಕಾರಿ ಅಧೀಕ್ಷಕ ವಿಜಯಕುಮಾರ ಹಿರೇಮಠ, ಅಬಕಾರಿ ಉಪ ಅಧೀಕ್ಷಕ ರವಿ ಮುರಗೋಡ ಮಾರ್ಗದರ್ಶನದಲ್ಲಿ ಖಾನಾಪೂರ ಅಬಕಾರಿ ವಲಯದ ಅಬಕಾರಿ ನಿರೀಕ್ಷಕ ಮಲ್ಲೇಶ ಉಪ್ಪಾರ, ಮಂಜುನಾಥ ಗಲಗಲಿ, ಕಣಕುಂಬಿ ತನಿಖಾ ಠಾಣೆಯಅಬಕಾರಿ ನಿರೀಕ್ಷಕ ಬಾಳಗೌಡ ಪಾಟೀಲ, ಕರೆಪ್ಪ ಹೊಳೆನ್ನವರ, ಚಂದ್ರಶೇಖರ ಕ್ಷೀರಸಾಗರ, ಅಮೃತ ಪೂಜೇರಿ, ಶರಣಪ್ಪ ತಳವಾರ, ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.