ದರ್ಶನ್‌, ಸಹಚರರ ಜಾಮೀನು ಅರ್ಜಿ ಇಂದು ಸುಪ್ರೀಂ ವಿಚಾರಣೆ : ಬೇಲ್‌ ರದ್ದುಗೊಳಿಸಲು ಪೂರಕ ದಾಖಲೆ ಸಲ್ಲಿಕೆ

| N/A | Published : Apr 22 2025, 10:56 AM IST

actor darshan

ಸಾರಾಂಶ

ಚಂದನವನದ ನಟ ದರ್ಶನ್ ಜಾಮೀನು ರದ್ದುಕೋರಿರುವ ಅರ್ಜಿ ವಿಚಾರಣೆ ಮಂಗಳವಾರ ಸುಪ್ರೀಂಕೋಟ್೯ನಲ್ಲಿ ಬರಲಿದೆ.

ನವದೆಹಲಿ : ಚಂದನವನದ ನಟ ದರ್ಶನ್ ಜಾಮೀನು ರದ್ದುಕೋರಿರುವ ಅರ್ಜಿ ವಿಚಾರಣೆ ಮಂಗಳವಾರ ಸುಪ್ರೀಂಕೋಟ್೯ನಲ್ಲಿ ಬರಲಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ನಟ ದರ್ಶನ್ ಮತ್ತು ಸಹಚರರ ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಅರ್ಜಿ ನ್ಯಾ.ಜೆ.ಬಿ.ಪರ್ದೀವಾಲ, ನ್ಯಾ .ಆರ್. ಮಹದೇವನ್ ಅವರ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಮತ್ತು ಇತರರಿಗೆ ಸಿಕ್ಕಿರುವ ಜಾಮೀನು ರದ್ದುಗೊಳಿಸಲು ಮತ್ತಷ್ಟು ಪೂರಕ ದಾಖಲೆಗಳನ್ನು ಬೆಂಗಳೂರು ಪೊಲೀಸರು ಕಳೆದ ಶುಕ್ರವಾರ ಸಲ್ಲಿಸಿದ್ದಾರೆ

ತೀವ್ರ ಬೆನ್ನುನೋವು ಸಮಸ್ಯೆಯೊಡ್ಡಿ ಆಪರೇಷನ್ ಅಗತ್ಯ ಇದೆ. ಹಾಗಾಗಿ ನಟ ದರ್ಶನ್ ಗೆ ಜಾಮೀನು ಅಗತ್ಯ ಇದೆ ಎಂದು ಕರ್ನಾಟಕ ಹೈಕೋಟ್೯ನಲ್ಲಿ ಜಾಮೀನು ಪಡೆಯಲಾಗಿತ್ತು. ಆದರೆ ಜಾಮೀನು ಸಿಕ್ಕ ಬಳಿಕ ನಟ ದರ್ಶನ್ ಆಪರೇಷನ್ ಗೆ ಒಳಗಾಗಲೇ ಇಲ್ಲ. ಈ ವಿಚಾರವನ್ನು ಬೆಂಗಳೂರು ಪೊಲೀಸರು ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ

ಇತ್ತೀಚೆಗೆ ನ್ಯಾಯಾಲಯಕ್ಕೆಹಾಜರಾಗದೇ ಸಾಕ್ಷ್ಯದಾರರೊಬ್ಬರ ಜೊತೆ ಕೂತು ದರ್ಶನ್ ಸಿನಿಮಾ ನೋಡಿದ್ದ ವಿಡಿಯೋ ವೈರಲ್ ಅಗಿತ್ತು. ಆರೋಪಿಯ ನಡವಳಿಕೆಯಲ್ಲಿ ವ್ಯತ್ಯಾಸಗಳು ಇವೆ. ಹಾಗಾಗಿ ಆರೋಪಿ ಜಾಮೀನು ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದ್ದಾರೆ.

ಇದು ಕೇವಲ ದಾಖಲೆಗೆ ಸೀಮಿತವಾಗದೇ ವಿಡಿಯೋ ಸಾಕ್ಷ್ಯಗಳು ಕೂಡ ಕೋಟ್೯ನಲ್ಲಿ ಹಾಜರುಪಡಿಸಲು ಪೊಲೀಸರು ಸಿದ್ಧ ತೆ ಮಾಡಿಕೊಂಡಿದ್ದಾರೆ. ಇನ್ನು ಇಡೀ ಪ್ರಕರಣದಲ್ಲಿ ಎಲ್ಲರನ್ನೂ ಬೆಚ್ಚಿಬೀಳಿಸುವುದು ಕೊಲೆಯ ಬರ್ಬರತೆ. ನ್ಯಾಯಪೀಠದ ಮುಂದೆ ಕೊಲೆ ಮಾಡಿದ ರೀತಿ, ಮೃತನಿಗೆ ಸ್ಥಳದಲ್ಲಿ ಆರೋಪಿಗಳು ನೀಡಿರುವ ಟ್ರೀಟ್ ಮೆಂಟ್ ಎಲ್ಲವನ್ನೂ ವಿವರಿಸಲಿದ್ದಾರೆ. ಕೊಲೆ ಪ್ರಕರಣದಲ್ಲಿ 150ಕ್ಕೂ ಹೆಚ್ಚು ಸಾಕ್ಷ್ಯಗಳಿದ್ದು, ಆರೋಪಿ ಜೈಲಿಂದ ಹೊರಗಡೆ ಇದ್ದರೆ ಅಗತ್ಯ ಸಾಕ್ಷ್ಯಗಳು ನಾಶವಾಗಲಿವೆ ಎನ್ನುವುದು ಪೊಲೀಸರ ವಾದವಾಗಿದೆ.

ದರ್ಶನ್ ಯಡವಟ್ಟುಗಳನ್ನು ಪಟ್ಟಿ ಮಾಡಿರುವ ಬೆಂಗಳೂರು ಪೊಲೀಸರು, ಕರ್ನಾಟಕ ಹೈಕೋಟ್೯ ಆದೇಶ ರದ್ದು ಮಾಡಿ ಆರೋಪಿಯನ್ನು ಜೈಲಿಗೆ ಕಳುಹಿಸುವಂತೆ ಹೆಚ್ಚುವರಿ ದಾಖಲೆಗಳನ್ನು ಸುಪ್ರೀಂಕೋಟ್೯ಗೆ ಸಲ್ಲಿಸಿದ್ದಾರೆ.