ಸಾರಾಂಶ
ನಾನು ಫ್ಲಿಪ್‌ಕಾರ್ಟ್ ಸಂಸ್ಥೆಗೆ 9809 ರು. ಪಾವತಿಸಿ ಹಾಸಿಗೆ ಖರೀದಿ ಮಾಡಿದ್ದೆ. ಖರೀದಿ ಮಾಡುವಾಗ ಫ್ಲಿಪ್‌ಕಾರ್ಟ್‌ನ ಅಂತರ್ಜಾಲದ ಫೋಟೋದಲ್ಲಿ ನಾನು ನೋಡಿದ್ದ ಉದ್ದನೆಯ ಹಾಸಿಗೆ ನೀಡುವ ಬದಲಿಗೆ ಬಿಳಿ ಬಣ್ಣದ ಗೋಣಿಚೀಲದಲ್ಲಿ ಸುತ್ತಿರುವ ಒಂದು ಸಣ್ಣ ಹಾಸಿಗೆಯನ್ನು ಕಳುಹಿಸಿದ್ದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಫ್ಲಿಪ್‌ಕಾರ್ಟ್ ಸಂಸ್ಥೆಯಿಂದ ನನಗೆ ವಂಚನೆಯಾಗಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ಗ್ರಾಹಕ ಹಾಗೂ ಆಸರೆ ಟ್ರಸ್ಟ್‌ನ ಅಧ್ಯಕ್ಷ ಎಚ್.ಬಿ.ಮಂಜುನಾಥ್ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾನು ಫ್ಲಿಪ್‌ಕಾರ್ಟ್ ಸಂಸ್ಥೆಗೆ 9809 ರು. ಪಾವತಿಸಿ ಹಾಸಿಗೆ ಖರೀದಿ ಮಾಡಿದ್ದೆ. ಖರೀದಿ ಮಾಡುವಾಗ ಫ್ಲಿಪ್‌ಕಾರ್ಟ್‌ನ ಅಂತರ್ಜಾಲದ ಫೋಟೋದಲ್ಲಿ ನಾನು ನೋಡಿದ್ದ ಉದ್ದನೆಯ ಹಾಸಿಗೆ ನೀಡುವ ಬದಲಿಗೆ ಬಿಳಿ ಬಣ್ಣದ ಗೋಣಿಚೀಲದಲ್ಲಿ ಸುತ್ತಿರುವ ಒಂದು ಸಣ್ಣ ಹಾಸಿಗೆಯನ್ನು ಕಳುಹಿಸಿದ್ದರು.
ಇದನ್ನು ನಾನು ಸಂಬಂಧಿಸಿದವರಿಗೆ ತಿಳಿಸಿ ಈಗ ಕಳುಹಿಸಿರುವ ಹಾಸಿಗೆಯನ್ನು ವಾಪಸ್ ಪಡೆದು ನಾವು ಕೇಳಿರುವ ಹಾಸಿಗೆಯನ್ನು ಕಳುಹಿಸಿ. ಇಲ್ಲ ಹಣವನ್ನು ಮರುಪಾವತಿಸುವಂತೆ ಮನವಿ ಮಾಡಿದ್ದರೂ ಸಹ ನಮ್ಮ ತಂತ್ರಜ್ಞರು ನಿಮ್ಮ ಮನೆಗೆ ಎರಡು ಸಾರಿ ಭೇಟಿ ನೀಡಿ ಪರಿಶೀಲಿಸಿದ್ದು, ನಾವು ನೀಡಿರುವ ಹಾಸಿಗೆ ಸರಿಯಾಗಿದೆ. ನಾವು ವಾಪಸ್ ಪಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಮಂಜುನಾಥ್ ದೂರಿದರು.ವಾಸ್ಥವವಾಗಿ ಯಾರೂ ನಮ್ಮ ಮನೆಗೆ ಬಂದು ಹಾಸಿಗೆಯನ್ನು ಪರಿಶೀಲನೆ ಮಾಡಿಲ್ಲ. ಹಾಸಿಗೆ ಇರುವ ಚೀಲವನ್ನೆ ಓಪನ್ ಮಾಡಿಲ್ಲ. ಒಂದು ವೇಳೆ ಸರಿ ಇದ್ದರೆ ಸಂಸ್ಥೆಯ ತಂತ್ರಜ್ಞರು ನಮ್ಮ ಮನೆಗೆಬಂದು ನನಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿತ್ತು. ಆದರೆ, ಒಮ್ಮೆಯೂ ನಮ್ಮ ಮನೆಗೆ ಯಾರೂ ಬಂದಿಲ್ಲ. ಆದರೂ ಎರಡು ಬಾರಿ ತಂತ್ರಜ್ಞರು ಪರಿಶೀಲನೆ ಮಾಡಿರುವುದರಿಂದ ವಾಪಸ್ ಪಡೆಯುವ ಮನವಿಯನ್ನೇ ಮುಕ್ತಾಯ ಮಾಡಿದ್ದೇವೆ ಎಂದು ನನಗೆ ಮೆಸೆಜ್ ಮಾಡುವ ಮೂಲಕ ನನಗೆ ಫ್ಲಿಪ್‌ಕಾರ್ಟ್ ಸಂಸ್ಥೆ ವಂಚನೆ ಮಾಡಿದೆ. ನಾನು ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.