ಸಾರಾಂಶ
ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಡೆಪ್ಯುಟಿ ಸೂಪರಿಂಟೆಂಡೆಂಟ್ ಒಬ್ಬರನ್ನು ಉತ್ತರಪ್ರದೇಶ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಿ ಆದೇಶ ಹೊರಡಿಸಿದೆ.
ಲಖನೌ: ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಡೆಪ್ಯುಟಿ ಸೂಪರಿಂಟೆಂಡೆಂಟ್ ಒಬ್ಬರನ್ನು ಉತ್ತರಪ್ರದೇಶ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಿ ಆದೇಶ ಹೊರಡಿಸಿದೆ.
ಕೌಟುಂಬಿಕ ಕಾರಣಕ್ಕೆ 2021ರ ಜು.6ರಂದು ಪೊಲೀಸ್ ವರಿಷ್ಠಾಧಿಕಾರಿಗಳಿಂದ ರಜೆ ಪಡೆದಿದ್ದ ಡಿಎಸ್ಪಿ ಕ್ರಿಪಾ ಶಂಕರ್ ಕನೌಜಿಯಾ ಮಹಿಳಾ ಪೇದೆ ಜೊತೆ ಹೋಟೆಲ್‌ಗೆ ತೆರಳಿದ್ದರು. ಈ ನಡುವೆ ಪತಿಯನ್ನು ಸಂಪರ್ಕಿಸಲಾಗದೇ ಅವರ ಪತ್ನಿ ನೀಡಿದ ದೂರಿನ ಅನ್ವಯ ಹುಡುಕಾಟ ನಡೆಸಿದಾಗ ಕ್ರಿಪಾ ಶಂಕರ್ ಹೋಟೆಲ್‌ನಲ್ಲಿ ಪೇದೆ ಜೊತೆ ಸಿಕ್ಕಿಬಿದ್ದಿದ್ದರು.
ಆ ಪ್ರಕರಣದಲ್ಲಿ ಅವರು ದೋಷಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಇದೀಗ ಅವರಿಗೆ ಹಿಂಬಡ್ತಿ ನೀಡಲಾಗಿದೆ.