ಸಾರಾಂಶ
ರೈಲು ನಿಲ್ದಾಣದ ಬಳಿ ಸಿಗ್ನಲ್ ಸರಿಪಡಿಸುತ್ತಿದ್ದ ಮೂವರು ರೈಲ್ವೆ ನೌಕಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ನೌಕರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯ ಜಹಾಂಗೀರಾಬಾದ್ ನಿಲ್ದಾಣದಲ್ಲಿ ನಡೆದಿದೆ.
ಲಖನೌ: ರೈಲು ನಿಲ್ದಾಣದ ಬಳಿ ಸಿಗ್ನಲ್ ಸರಿಪಡಿಸುತ್ತಿದ್ದ ಮೂವರು ರೈಲ್ವೆ ನೌಕಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ನೌಕರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯ ಜಹಾಂಗೀರಾಬಾದ್ ನಿಲ್ದಾಣದಲ್ಲಿ ನಡೆದಿದೆ. ಅರವಿಂದ್ ಕುಮಾರ್, ತಾಲಾ ಸೊರೇನ್ ಮತ್ತು ದೇವಿ ಪ್ರಸಾದ್ ಎಂಬ ಕಾರ್ಮಿಕರು ರೈಲಿನ ಸಿಗ್ನಲ್ ಕಂಬವೊಂದರ ಸಮಸ್ಯೆ ಸರಿಪಡಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕೊಚ್ಚಿ ಎಕ್ಸ್‌ಪ್ರೆಸ್ ಮತ್ತು ಬರೌನಿ ಎಕ್ಸ್ಪ್ರೆಸ್ ರೈಲುಗಳು ಅಕ್ಕಪಕ್ಕದ ಹಳಿಯಲ್ಲಿ ಬಂದಿವೆ. ಈ ವೇಳೆ ಅವರು ಅಲ್ಲಿಂದ ತೆರಳಲು ಯತ್ನಿಸಿದ ವೇಳೆ ರೈಲು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
;Resize=(128,128))
;Resize=(128,128))
;Resize=(128,128))