ದಾವಣಗೆರೆಯಲ್ಲಿ ನಡೆಯಲಿರುವ ಸಾಹಿತ್ಯ ಪರಿಷದ್‌ ಅಧಿವೇಶನಕ್ಕೆ ಸಾಹಿತಿ ಸಂಪರ್ಕ ಅಭಿಯಾನ

| N/A | Published : Mar 23 2025, 01:33 AM IST / Updated: Mar 23 2025, 04:49 AM IST

roshni

ಸಾರಾಂಶ

‘ಸಾಹಿತ್ಯದಲ್ಲಿ ಸತ್ವ’ ವಿಷಯ ಕುರಿತು ಬರುವ ಜೂ.7 ಮತ್ತು 8ರಂದು ದಾವಣಗೆರೆಯಲ್ಲಿ ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ನಾಲ್ಕನೆಯ ಅಧಿವೇಶನದ ನಿಮಿತ್ತ ರಾಜ್ಯಾದ್ಯಂತ ಸತ್ವಯುತ ಸಾಹಿತಿಗಳ ಸಂಪರ್ಕ ಅಭಿಯಾನ’ ನಡೆಸಲಾಯಿತು.

 ಬೆಂಗಳೂರು :  ‘ಸಾಹಿತ್ಯದಲ್ಲಿ ಸತ್ವ’ ವಿಷಯ ಕುರಿತು ಬರುವ ಜೂ.7 ಮತ್ತು 8ರಂದು ದಾವಣಗೆರೆಯಲ್ಲಿ ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ನಾಲ್ಕನೆಯ ಅಧಿವೇಶನದ ನಿಮಿತ್ತ ರಾಜ್ಯಾದ್ಯಂತ ಸತ್ವಯುತ ಸಾಹಿತಿಗಳ ಸಂಪರ್ಕ ಅಭಿಯಾನ’ ನಡೆಸಲಾಯಿತು.

ಭಾರತೀಯ ಸಂವೇದನೆ ಇಟ್ಟುಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಎಪ್ಪತ್ತಕ್ಕೂ ಹೆಚ್ಚು ಪ್ರಮುಖ ಸಾಹಿತಿಗಳನ್ನು ಅವರ ಮನೆಗಳಿಗೆ ತೆರಳಿ ಭೇಟಿಯಾದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯಕರ್ತರು, ಸಾಹಿತಿಗಳನ್ನು ಅಧಿವೇಶನಕ್ಕೆ ಆಮಂತ್ರಿಸಿದರು.

ಬೆಂಗಳೂರಿನ ಅ.ರಾ.ಮಿತ್ರ, ಡಾ। ಶತಾವಧಾನಿ ರಾ.ಗಣೇಶ, ಡಾ। ನಾ.ಸೋಮೇಶ್ವರ, ಡಾ। ಎಲ್.ವಿ.ಶಾಂತಕುಮಾರಿ, ಮೈಸೂರಿನ ಟಿ.ವಿ.ವೆಂಕಟಾಚಲ ಶಾಸ್ತ್ರಿ, ಡಾ। ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ), ಡಾ। ವಸನ್ತ ಭಾರದ್ವಾಜ್, ಧಾರವಾಡದ ಡಾ। ಸಂಗಮೇಶ್ವರ ಸವದತ್ತಿಮಠ, ಆನಂದ ಝಂಝರವಾಡ, ಮಂಗಳೂರಿನ ಡಾ। ಕೆ.ಚಿನ್ನಪ್ಪ ಗೌಡ, ಪ.ರಾಮಕೃಷ್ಣ ಶಾಸ್ತ್ರಿ, ಬಳ್ಳಾರಿಯ ಟಿ.ಕೆ.ಗಂಗಾಧರ ಪತ್ತಾರ, ಕೋಲಾರದ ಕೃಷ್ಣಪ್ಪ ಕೋಗಿಲಹಳ್ಳಿ, ಸ.ರಘುನಾಥ, ದಾವಣಗೆರೆಯ ಜಿ.ಕೆ.ಕುಲಕರ್ಣಿ ಮತ್ತಿತರರು ಸೇರಿ ಎಪ್ಪತ್ತಕ್ಕೂ ಅಧಿಕ ಪ್ರಮುಖ ಸಾಹಿತಿಗಳನ್ನು ಪರಿಷತ್ತಿನ ಕಾರ್ಯಕರ್ತರು ಭೇಟಿಯಾಗಿ ಸನ್ಮಾನಿಸಿ ದಾವಣಗೆರೆ ಅಧಿವೇಶನಕ್ಕೆ ಆಮಂತ್ರಣ ನೀಡಿದ್ದಾರೆ.

ಮನೆಗೇ ಬಂದು ಸಾಧನೆ ಗುರುತಿಸಿ ಅಧಿವೇಶನದ ನಿಮಿತ್ತ ಸನ್ಮಾನಿಸಿ ಆಪ್ತತೆ ತೋರಿದ ಇಂಥ ಸನ್ನಿವೇಶ ತಮ್ಮ ಬದುಕಿನಲ್ಲಿ ಇದೇ ಮೊದಲನೆಯದು ಎಂದು ಅನೇಕ ಸಾಹಿತಿಗಳು ಪ್ರತಿಕ್ರಿಯಿಸಿ, ಪರಿಷತ್ತಿನ ಕಾರ್ಯಕರ್ತರು ಅನುಪಮ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತಿ ಬಾರಿಯೂ ಒಂದು ನಿರ್ದಿಷ್ಟ ವಿಷಯದ ಮೇಲೆಯೇ ಜರಗುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧಿವೇಶನದಲ್ಲಿ ಈ ಬಾರಿ ‘ಸಾಹಿತ್ಯದಲ್ಲಿ ಸ್ವತ್ವ’ ಎಂಬ ವಿಷಯ ಇಟ್ಟುಕೊಂಡಿರುವುದನ್ನು ಅನೇಕ ಸಾಹಿತಿಗಳು ಮೆಚ್ಚಿಕೊಂಡಿದ್ದಾರೆ. ಸತ್ವದ ಮೇಲೆ ಇಲ್ಲಿಯವರೆಗೆ ಯಾವುದೇ ಸಾಹಿತ್ಯ ಗೋಷ್ಠಿ ನಡೆದ ದಾಖಲೆ ಇಲ್ಲ ಎಂದಿರುವ ಅವರು, ಭಾರತ ಸ್ವತಂತ್ರವಾದಾಗಲೇ ಎಲ್ಲ ಕ್ಷೇತ್ರಗಳಲ್ಲೂ ಈ ಕುರಿತು ಗಂಭೀರವಾಗಿ ಆಲೋಚನೆ ನಡೆಸಬೇಕಿತ್ತು. ಪರಿಷತ್ತು ಇದೀಗ ಈ ವಿಷಯದ ಮೇಲೆ ಅಧಿವೇಶನ ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ'''''''' ಎಂದು ಹೇಳಿದ್ದಾರೆ.