ಸಾರಾಂಶ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಕುಡಿದ ಮತ್ತಿನಲ್ಲಿರುವ ಮತ್ತು ನಗ್ನಾವಸ್ಥೆಯಲ್ಲಿರುವ ದೃಶ್ಯಗಳನ್ನು ಬಿಡುಗಡೆ ಮಾಡುವುದಾಗಿ ಅವರ ಮಾಜಿ ಪತ್ನಿ ಪ್ರೀತ್ ಗ್ರೆವಾಲ್ ಬೆದರಿಕೆ ಹಾಕಿದ್ದಾರೆ.
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಕುಡಿದ ಮತ್ತಿನಲ್ಲಿರುವ ಮತ್ತು ನಗ್ನಾವಸ್ಥೆಯಲ್ಲಿರುವ ದೃಶ್ಯಗಳನ್ನು ಬಿಡುಗಡೆ ಮಾಡುವುದಾಗಿ ಅವರ ಮಾಜಿ ಪತ್ನಿ ಪ್ರೀತ್ ಗ್ರೆವಾಲ್ ಬೆದರಿಕೆ ಹಾಕಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಪ್ರೀತ್, ‘ಈಗಿನ್ನೂ ಆರಂಭವಾಗಿದೆ. ನಾನು ನಿಮಗೆ ಇದು ಹೇಗೆ ಮುಂದುವರೆಯುತ್ತದೆ ಎಂದು ತೋರಿಸುತ್ತೇನೆ. ಜಾಗೃತರಾಗಿರಿ’ ಎಂದು ಬರೆದುಕೊಂಡಿದ್ದಾರೆ. ಶನಿವಾರವಷ್ಟೇ ಪ್ರೀತ್ ಮತ್ತು ಮಾನ್ ಅವರ ಪುತ್ರಿ ಸೀರತ್, ‘ತನ್ನ ತಂದೆ ಕುಡುಕ ಮತ್ತು ತನ್ನ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆ ಮಾಡುವ ವ್ಯಕ್ತಿ’ ಎಂದು ಅಸಮಾಧಾನ ತೋಡಿಕೊಳ್ಳುವ ವಿಡಿಯೋ ಪೋಸ್ಟ್ ಮಾಡಿದ್ದರು.