-ಆರೋಪಿ ಡಿ.ಜೆ.ಹಳ್ಳಿ ನಿವಾಸಿ ಶಬೀಲ್‌. ತಂದೆಯ ಈರುಳ್ಳಿ ಅಂಗಡಿ ನೋಡಿಕೊಳ್ಳುತ್ತಿದ್ದ

-ಕೆ.ಜಿ.ಹಳ್ಳಿಯ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದ 17 ರ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ

- ಪ್ರೀತಿ ವಿಚಾರ ಇಬ್ಬರ ಕುಟುಂಬಕ್ಕೂತಿಳಿದು ನಿಶ್ಚಿತಾರ್ಥ ಮಾಡಿ ಮದುವೆಗೆ ಒಪ್ಪಿದ್ದರು

-ಈ ನಡುವೆ ಅಪ್ರಾಪ್ತೆ ಮದುವೆಗೆ ನಿರಾಕರಿಸಿದ್ದಳು. ಸಿಟ್ಟಿಗೆದ್ದ ಆರೋಪಿ ಆಕೆಯ ಕೊಂದಕನ್ನಡಪ್ರಭ ವಾರ್ತೆ ಬೆಂಗಳೂರುಪರಸ್ಪರ ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಮದುವೆಗೆ ನಿರಾಕರಿಸಿದ ಅಪ್ರಾಪ್ತೆಯನ್ನು ಇತ್ತೀಚೆಗೆ ಮಾತನಾಡುವ ನೆಪದಲ್ಲಿ ಕರೆಸಿಕೊಂಡು ಆಕೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ರಾಜಸ್ಥಾನದ ಆಜ್ಮೀರ್‌ನಲ್ಲಿ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಡಿ.ಜೆ.ಹಳ್ಳಿ ನಿವಾಸಿ ಶಬೀಲ್(20) ಬಂಧಿತ. ಆರೋಪಿ ಮಾ.17ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಸಕ್ಕರೆ ಮಂಡಿ ಸಮೀಪದ ಪಾಳು ಬಿದ್ದ ಮನೆ ಬಳಿ 17 ವರ್ಷದ ಬಾಲಕಿಯನ್ನು ಕರೆಸಿಕೊಂಡು ಚಾಕುವಿನಿಂದ ಆಕೆಯ ಕತ್ತು ಕೊಯ್ದು ಹತ್ಯೆಗೈದಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು, ರಾಜಸ್ಥಾನದ ಆಜ್ಮೀರ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.ಪ್ರಕರಣದ ಹಿನ್ನೆಲೆ:ಡಿ.ಜೆ.ಹಳ್ಳಿ ನಿವಾಸಿ ಶಬೀಲ್‌ ತಂದೆಯ ಈರುಳ್ಳಿ ಅಂಗಡಿ ನೋಡಿಕೊಳ್ಳುತ್ತಿದ್ದ. ಕೆ.ಜಿ.ಹಳ್ಳಿಯ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ 17 ವರ್ಷದ ಅಪ್ರಾಪ್ತೆ ಪರಿಚಯವಾಗಿ ಸುಮಾರು ಒಂದು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಪ್ರತಿ ದಿನ ಸಕ್ಕರೆ ಮಂಡಿ ಬಳಿ ಭೇಟಿಯಾಗುತ್ತಿದ್ದರು. ಪ್ರೀತಿ ವಿಚಾರ ಇಬ್ಬರ ಕುಟುಂಬಕ್ಕೂ ಗೊತ್ತಾಗಿ ಕೆಲ ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿದ್ದರು. ಬಕ್ರಿದ್‌ ಹಬ್ಬದ ಬಳಿಕ ಮದುವೆ ಮಾಡಲು ಮಾತುಕತೆ ನಡೆಸಿದ್ದರು.ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್‌:ಈ ನಡುವೆ ಅಪ್ರಾಪ್ತೆ, ಶಬೀಲ್‌ ಜೊತೆಗೆ ಮದುವೆಯಾಗಲು ನಿರಾಕರಿಸಿದ್ದಳು. ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದರಿಂದ ಕೋಪಗೊಂಡಿದ್ದ ಶಬೀಲ್‌, ಮಾ.17ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಅಪ್ರಾಪ್ತೆಯನ್ನು ಪಾಳು ಬಿದ್ದ ಮನೆ ಬಳಿ ಕರೆಸಿಕೊಂಡಿದ್ದ. ಬಳಿಕ ಜಗಳ ತೆಗೆದು ಚಾಕುವಿನಿಂದ ಆಕೆಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ.ಈ ಸಂಬಂಧ ಕೊಲೆಯಾದ ಅಪ್ರಾಪ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಆರೋಪಿ ಶಬೀಲ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಶೋಧ ನಡೆಸುತ್ತಿದ್ದರು. ಆರೋಪಿಯು ರಾಜಸ್ಥಾನದ ಆಜ್ಮೀರ್‌ನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರ ತಂಡ, ಆಜ್ಮೀರ್‌ಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.