ಸಾರಾಂಶ
ಚಿಕಿತ್ಸೆ ಫಲಕಾರಿಯಾಗದೆ ದೇಹ ನಿಷ್ಕ್ರಿಯಗೊಂಡ ಕಾರಣ ರವಿಚಂದ್ರ ಪತ್ನಿ ರಂಜಿತ ತನ್ನ ಪತಿ ದೇಹದ ಅಂಗಾಂಗಳು ಇತರೆ ಜನರಿಗೆ ಸಹಾಯವಾಗಲಿ ಎಂಬ ಮಾನವೀಯತೆ ಮೆರೆದು ರವಿಚಂದ್ರ ಕಿಡ್ನಿ, ಚರ್ಮ, ಹೃದಯ ಸೇರಿ ದೇಹದ ಹಲವು ಭಾಗಗಳನ್ನು ದಾನ ನೀಡಿದ್ದಾರೆ. ಕೆಆರ್‌ಸಾಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಾಯಿ ಅಡ್ಡ ಬಂದು ಬೈಕ್ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದು, ಕುಟುಂಬಸ್ಥರು ವ್ಯಕ್ತಿಯ ಅಂಗಾಂಗ ದಾನಕ್ಕೆ ಮುಂದಾದರು.ತಾಲೂಕಿನ ಹುಲಿಕರೆ ಗ್ರಾಮದ ರವಿಚಂದ್ರ (39) ಮೃತ ವ್ಯಕ್ತಿ.
ಕಳೆದ ಮೇ 24ರ ಶುಕ್ರವಾರ ರಾತ್ರಿ ತಾಲೂಕಿನ ಕೆಆರ್ ಸಾಗರದ ಸಂತೆಮಾಳದ ಮುಖ್ಯ ರಸ್ತೆಯಲ್ಲಿ ಕೆಲಸ ಮುಗಿಸಿ ವಾಪಸ್ ಸ್ವಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿ ರವಿಚಂದ್ರ ತಲೆ ತೀವ್ರ ಪೆಟ್ಟಾಗಿತ್ತು.ತಕ್ಷಣ ಅವರನ್ನು ಮೈಸೂರು ಕೆಆರ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟರು.
ಅಂಗಾಂಗ ದಾನ:ಚಿಕಿತ್ಸೆ ಫಲಕಾರಿಯಾಗದೆ ದೇಹ ನಿಷ್ಕ್ರಿಯಗೊಂಡ ಕಾರಣ ರವಿಚಂದ್ರ ಪತ್ನಿ ರಂಜಿತ ತನ್ನ ಪತಿ ದೇಹದ ಅಂಗಾಂಗಳು ಇತರೆ ಜನರಿಗೆ ಸಹಾಯವಾಗಲಿ ಎಂಬ ಮಾನವೀಯತೆ ಮೆರೆದು ರವಿಚಂದ್ರ ಕಿಡ್ನಿ, ಚರ್ಮ, ಹೃದಯ ಸೇರಿ ದೇಹದ ಹಲವು ಭಾಗಗಳನ್ನು ದಾನ ನೀಡಿದ್ದಾರೆ. ಕೆಆರ್‌ಸಾಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತರಿಗೆ ಪತ್ನಿ ರಂಜಿತ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಮೃತರ ಸ್ವಗ್ರಾಮ ಬನ್ನೂರು ಗ್ರಾಮದಲ್ಲಿ ನಡೆಯಿತು.