ಪಕ್ಕದ ಮನೆಯವರು ಕಿಟಕಿ ತೆರೆದು ಸೆಕ್ಸ್‌ ಮಾಡ್ತಾರೆ: ಮಹಿಳೆಯ ದೂರು!

| Published : Mar 21 2024, 01:45 AM IST / Updated: Mar 21 2024, 09:15 AM IST

sex up
ಪಕ್ಕದ ಮನೆಯವರು ಕಿಟಕಿ ತೆರೆದು ಸೆಕ್ಸ್‌ ಮಾಡ್ತಾರೆ: ಮಹಿಳೆಯ ದೂರು!
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಕಪಕ್ಕದ ಮನೆಯವರು ವಾಹನ ಪಾರ್ಕಿಂಗ್, ನೀರು ಹಾಗೂ ಸಾಕು ನಾಯಿ ವಿಚಾರವಾಗಿ ಕಿತ್ತಾಡುವುದು ಸಹಜ. ಆದರೆ ಬೆಂಗಳೂರಿನ ಗಿರಿನಗರದಲ್ಲಿ ಅಕ್ಕಪಕ್ಕದ ಮನೆಯವರ ಮಧ್ಯೆ ಗಲಾಟೆಗೆ ಬೆಡ್‌ರೂಮ್‌ನ ಸರಸ ಸಲ್ಲಾಪ ಕಾರಣವಾಗಿದೆ...!

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ಕಪಕ್ಕದ ಮನೆಯವರು ವಾಹನ ಪಾರ್ಕಿಂಗ್, ನೀರು ಹಾಗೂ ಸಾಕು ನಾಯಿ ವಿಚಾರವಾಗಿ ಕಿತ್ತಾಡುವುದು ಸಹಜ. ಆದರೆ ಬೆಂಗಳೂರಿನ ಗಿರಿನಗರದಲ್ಲಿ ಅಕ್ಕಪಕ್ಕದ ಮನೆಯವರ ಮಧ್ಯೆ ಗಲಾಟೆಗೆ ಬೆಡ್‌ರೂಮ್‌ನ ಸರಸ ಸಲ್ಲಾಪ ಕಾರಣವಾಗಿದೆ...!

ಬೆಡ್‌ರೂಮ್ ಕಿಟಕಿ ತೆರೆದುಕೊಂಡು ಪಕ್ಕದ ಮನೆಯ ಗಂಡ-ಹೆಂಡತಿ ಲೈಂಗಿಕ ಕ್ರಿಯೆ ನಡೆಸುತ್ತಾರೆ. ಇದು ತಮಗೆ ಮುಜುಗರ ತಂದಿದೆ ಎಂದು ಗಿರಿನಗರ ಪೊಲೀಸರಿಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಗಿರಿನಗರ ಠಾಣಾ ವ್ಯಾಪ್ತಿಯ ಅವಲಹಳ್ಳಿ ಮುಖ್ಯರಸ್ತೆಯ ಬಿಡಿಎ ಲೇಔಟ್‌ನಲ್ಲಿ ಈ ವಿಚಿತ್ರ ಗಲಾಟೆ ನಡೆದಿದ್ದು, ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಗಿರಿನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕಿಟಕಿ ಹಾಕಿಕೊಳ್ಳಿ ಎಂದಿದ್ದಕ್ಕೆ ಬೆದರಿಕೆ: ‘ನಮ್ಮ ಮನೆ ಎರಡನೇ ಮಹಡಿಯಲ್ಲಿದ್ದು, ನಮ್ಮ ಮನೆಯ ಬಾಗಿಲಿಗೆ ಪಕ್ಕದ ಮನೆಯವರ ಬೆಡ್‌ರೂಮ್ ಕಿಟಕಿ ಇದೆ. ಇತ್ತೀಚೆಗೆ ರಾತ್ರಿ 10.30ರ ಸುಮಾರಿಗೆ ಕಿಟಕಿ ತೆರೆದು ತಮ್ಮ ಹೆಂಡತಿ ಜೊತೆ ಲೈಂಗಿಕ ಕ್ರಿಯೆಯನ್ನು ಮಾಡುವ ಮೂಲಕ ಬಹಳ ವಿಕೃತ ಮತ್ತು ಅಸಹ್ಯ ಮನಸ್ಥಿತಿಯಿಂದ ಪಕ್ಕದ ಮನೆಯವರು ನಡೆದುಕೊಳ್ಳುತ್ತಿದ್ದರು. 

ಈ ನಡವಳಿಕೆಯಿಂದ ತಮಗೆ ಬಹಳ ಮುಜುಗರವಾಯಿತು. ಆಗ ತಾವು ಬೆಡ್‌ ರೂಮ್ ಕಿಟಕಿ ಹಾಕಿಕೊಳ್ಳುವಂತೆ ಮನವಿ ಮಾಡಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನನ್ನ ಹಾಗೂ ನನ್ನ ಕುಟುಂಬದವರಿಗೆ ನೆರೆಮನೆಯ ವ್ಯಕ್ತಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೆ ನನ್ನ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಸಿದ್ದಾನೆ’ ಎಂದು ಮಹಿಳೆ ದೂರಿದ್ದಾರೆ.

ಈ ವಿಚಾರ ತಿಳಿದ ಮನೆ ಮಾಲಿಕರು ಸಹ, ನೆರೆಮನೆ ವ್ಯಕ್ತಿ ಜತೆ ಸೇರಿ ನಮ್ಮ ಮೇಲೆ ಗಲಾಟೆ ಮಾಡಿದ್ದಾರೆ. ಅಲ್ಲದೆ ಕೆಲ ಯುವಕರ ಜತೆ ಸೇರಿ ಜೀವ ಬೆದರಿಕೆ ಹಾಕಿದ್ದಾರೆ. 

ಹೀಗಾಗಿ ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.