ಸಾರಾಂಶ
ಮುಂಬರುವ ಡಿ.26 ರಂದು ನನ್ನ ಹುಟ್ಟುಹಬ್ಬ ಆಚರಣೆಗೆ ಕ್ಷೇತ್ರದ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ತಯಾರಿ ನಡೆಸುತ್ತಿರುವುದು ಗಮನಕ್ಕೆ ಬಂದ ಕಾರಣ ಅದ್ದೂರಿ ಹುಟ್ಟುಹಬ್ಬ ಆಚರಣೆ ಬೇಡ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮನವಿ ಮಾಡಿದ್ದಾರೆ.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬರ ಆವರಿಸಿದೆ. ಕ್ಷೇತ್ರದ ಜನ ಬರ ಎದುರಿಸುವ ಸಮಯದಲ್ಲಿ ಹುಟ್ಟುಹಬ್ಬಕ್ಕೆ ನನ್ನ ವಿರೋಧವಿದೆ ಎಂದರು.ಬಡವರು, ಮಕ್ಕಳಿಗೆ ನೆರವಾಗಿ:ನನ್ನ ಹುಟ್ಟುಹಬ್ಬಕ್ಕೆ ಶಾಲು,ಹಾರ,ಉಡುಗೊರೆಯ ಜೊತೆಗೆ ಕೇಕ್ ಕಟಿಂಗ್ ಮತ್ತು ಬ್ಯಾನರ್ ಗಳಿಗೆ ಕೊಡುವ ಹಣವನ್ನು ಬಡವರು ಹಾಗೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವಂತೆ ಕಿವಿಮಾತು ಹೇಳಿದರು.
ಡಿ.26 ರಂದು ಗಣೇಶ್ ಪ್ರಸಾದ್ ಜನುಮ ದಿನ । ರಾಜ್ಯದಲ್ಲಿ ಬರ ಹಿನ್ನೆಲೆ ಅದ್ಧೂರಿ ಆಚರಣೆಗೆ ಬ್ರೇಕ್
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮುಂಬರುವ ಡಿ.26 ರಂದು ನನ್ನ ಹುಟ್ಟುಹಬ್ಬ ಆಚರಣೆಗೆ ಕ್ಷೇತ್ರದ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ತಯಾರಿ ನಡೆಸುತ್ತಿರುವುದು ಗಮನಕ್ಕೆ ಬಂದ ಕಾರಣ ಅದ್ದೂರಿ ಹುಟ್ಟುಹಬ್ಬ ಆಚರಣೆ ಬೇಡ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮನವಿ ಮಾಡಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬರ ಆವರಿಸಿದೆ. ಕ್ಷೇತ್ರದ ಜನ ಬರ ಎದುರಿಸುವ ಸಮಯದಲ್ಲಿ ಹುಟ್ಟುಹಬ್ಬಕ್ಕೆ ನನ್ನ ವಿರೋಧವಿದೆ ಎಂದರು.ಬಡವರು, ಮಕ್ಕಳಿಗೆ ನೆರವಾಗಿ:
ನನ್ನ ಹುಟ್ಟುಹಬ್ಬಕ್ಕೆ ಶಾಲು,ಹಾರ,ಉಡುಗೊರೆಯ ಜೊತೆಗೆ ಕೇಕ್ ಕಟಿಂಗ್ ಮತ್ತು ಬ್ಯಾನರ್ ಗಳಿಗೆ ಕೊಡುವ ಹಣವನ್ನು ಬಡವರು ಹಾಗೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವಂತೆ ಕಿವಿಮಾತು ಹೇಳಿದರು.ತೃಪ್ತಿ ನೀಡುತ್ತಿವೆ:
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಜೊತೆಗೆ ತೃಪ್ತಿಯು ಇದೆ. ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆ ಶೇ.90 ರಷ್ಟು ಮಹಿಳೆಯರು ಫಲಾನುಭವಿಗಳಿದ್ದಾರೆ. ಇಲಾಖೆಯ ಮಾಹಿತಿ ಪ್ರಕಾರ 54497 ಮಹಿಳೆಯರು ಉಪಯೋಗ ಪಡೆದುಕೊಂಡಿದ್ದಾರೆ. ಇನ್ನೂಳಿದವರು ಉಪಯೋಗ ಪಡೆದರೆ ಹೆಚ್ಚಾಗುವ ಸಾದ್ಯತೆಯೂ ಇದೆ ಎಂದರು.ಶೀಘ್ರದಲ್ಲಿ ಪರಿಹಾರ:
ಪಟ್ಟಣ ಪ್ರದೇಶದಿಂದ ವಿವಿಧ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ಬಸ್ ಸೌಲಭ್ಯದ ಸಮಸ್ಯೆಗಳು ಕೇಳಿ ಬರುತ್ತಿರುವ ಹಿನ್ನೆಲೆ ಸಾರಿಗೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.ಬಳಸಿಕೊಳ್ಳಲು ಕರೆ:
ಸಂಗಮ ಪ್ರತಿಷ್ಠಾನ ಟ್ರಸ್ಟ್ ಉಚಿತ ಕೃತಕ ಕಾಲು ಜೋಡಣೆ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಶಿಬಿರಕ್ಕೆ ಸಂಬಂಧಿಸಿದಂತೆ ಡಿ.11 ರಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ತಪಾಸಣಾ ಶಿಬಿರ ನಡೆಯಲಿದೆ. ಕೃತಕ ಕಾಲು ಜೋಡಣೆಗೆ ಹೆಸರು ನೋಂದಾಯಿಸಿಕೊಳ್ಳಬೇಕು, ಡಿ.26 ರಂದು ವಿತರಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಉಪಾಧ್ಯಕ್ಷ ಕೆ.ಎಸ್. ಮಹೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕುಮಾರಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಪುರಸಭೆ ಮಾಜಿ ಉಪಾಧ್ಯಕ್ಷ ಎಸ್‌ಆರ್ ಎಸ್ ರಾಜು, ಜಿಲ್ಲಾ ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಬರಗಿ ಶ್ರೀಕಂಠಪ್ಪ ಇದ್ದರು.
-----