ಸಾರಾಂಶ
ಭುವನೇಶ್ವರ: ಹಾವು ಕಚ್ಚಿ ಸಾವನ್ನಪ್ಪಿದರೆ ಇರುವ ತಲಾ 4 ಲಕ್ಷ ರು. ಪರಿಹಾರ ಹಣದ ಆಸೆಗಾಗಿ ಒಡಿಶಾದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ 2 ವರ್ಷದ ಪುತ್ರಿಯನ್ನು ನಾಗರವಾವಿನಿಂದ ಕಚ್ಚಿಸಿ ಕೊಲೆ ಮಾಡಿಸಿದ ಭೀಕರ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.

ಕೆ. ಗಣೇಶ್ ಪಾತ್ರಾ ಎಂಬ ವ್ಯಕ್ತಿ ತನ್ನ ಪತ್ನಿ ಬಸಂತಿ ಜೊತೆ ವೈವಾಹಿಕ ಮನಸ್ತಾಪಗಳನ್ನು ಹೊಂದಿದ್ದ. ಅಲ್ಲದೆ, ಹಾವು ಕಚ್ಚಿ ಪತ್ನಿ, ಪುತ್ರಿ ಸತ್ತರೆ ಇಬ್ಬರಿಗೂ ಸೇರಿ 8 ಲಕ್ಷ ರು. ಪರಿಹಾರ ಹಣ ಲಭಿಸುತ್ತದೆ ಎಂದು ಅರಿತಿದ್ದ.ಹೀಗಾಗಿ ಉರಗತಜ್ಞನಿಂದ ಧಾರ್ಮಿಕ ಆಚರಣೆಗೆಂದು ನಾಗರಹಾವನ್ನು ತಂದು ಪತ್ನಿ ಹಾಗೂ ಮಗು ಮಲಗಿದ್ದ ಕೋಣೆಯೊಳಗೆ ಬಿಟ್ಟು ಅದರಿಂದ ಕಚ್ಚಿಸಿ ಕೊಲೆ ಮಾಡಿದ್ದಾನೆ. ಈ ಘಟನೆ ಅಕ್ಟೋಬರ್‌ನಲ್ಲಿ ನಡೆದಿದೆ. ಆತನ ಮಾವ ಕೊಟ್ಟ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ.