ಕನ್ನಡಪ್ರಭ ವಾರ್ತೆ ಬೆಂಗಳೂರು

ಐಪಿಎಲ್ ಪಂದ್ಯಾವಳಿ ವೇಳೆ ಸಣ್ಣ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುಂಜಾಗ್ರತೆ ವಹಿಸಿರುವ ಪೊಲೀಸರು, ಪಂದ್ಯ ಆರಂಭಕ್ಕೂ ನಾಲ್ಕು ತಾಸಿನ ಮೊದಲೇ ಕ್ರೀಡಾಂಗಣದಲ್ಲಿ ಹಾಜರಿರುವಂತೆ ಪ್ರೇಕ್ಷಕರಿಗೆ ಸೂಚಿಸಿದ್ದಾರೆ. ಅಲ್ಲದೆ ಪಂದ್ಯಾವಳಿ ಸಂದರ್ಭದಲ್ಲಿ ಕ್ರೀಡಾಂಗಣ ಸುತ್ತಮುತ್ತ ಸುಖಾಸುಮ್ಮನೆ ಓಡಾಟಕ್ಕೂ ಪೊಲೀಸರು ನಿರ್ಬಂಧಿಸಿದೆ.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗುತ್ತದೆ ಎಂದರು.

ಕ್ರೀಡಾಂಗಣದ ವ್ಯಾಪ್ತಿ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಪೊಲೀಸರ ಸೂಚನೆಗಳನ್ನು ಪ್ರೇಕ್ಷಕರಿಗೆ ಕಡ್ಡಾಯವಾಗಿ ಪಾಲನೆ ಮಾಡಬೇಕು. ಯಾವುದೇ ರೀತಿಯ ನಿಯಮ ಉಲ್ಲಂಘಿಸಿದರೆ ಸಹಿಸುವುದಿಲ್ಲ. ಕಾಲ್ತುಳಿತ ದುರಂತದ ಬಳಿಕ ಬಂದೋಬಸ್ತ್ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ ತರಲಾಗಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ಸೂಚನೆಗಳು:

-ಕನಿಷ್ಠ 4 ಗಂಟೆಗಳ ಮುಂಚಿತವಾಗಿ ಆಗಮಿಸಬೇಕು-ಕ್ರೀಡಾಂಗಣವನ್ನು ತಲುಪುವ ಮೊದಲು ಕ್ಯೂಆರ್‌ ಟಿಕೆಟ್‌ ಡೌನ್‌ಲೋಡ್ ಮಾಡಬೇಕು


-ಪೊಲೀಸ್ ಫಲಕಗಳ ಮತ್ತು ಸೂಚನೆಗಳನ್ನು ಪಾಲಿಸಬೇಕು-ನಿಷೇಧಿತ ವಸ್ತುಗಳನ್ನು ಕ್ರೀಡಾಂಗಣಕ್ಕೆ ತರಬಾರದು.

-ಬಿಎಂಟಿಸಿ ಹಾಗೂ ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ

-ಸ್ಟೇಡಿಯಂ ಗೇಟ್‌ಗಳ ಬಳಿ ವಾಹನಗಳಿಗೆ ಅವಕಾಶವಿಲ್ಲ.

-ಕ್ಯೂಆರ್‌ ಕೋಡ್ ಆಧಾರಿತ ಪ್ರವೇಶ-ಪ್ರವೇಶದ ವೇಳೆ ತಪಾಸಣೆಗೆ ಸಹಕರಿಸಬೇಕು

-ಮಾನ್ಯ ಟಿಕೆಟ್ ಇಲ್ಲದೆ ಯಾರಿಗೂ ಪ್ರವೇಶವಿಲ್ಲ

-ಕ್ರೀಡಾಂಗಣದ ಬಳಿ ಅಡ್ಡಾಡುವುದನ್ನು ನಿಷೇದಿಸಿದೆ

ವಾಹನಗಳ ನಿಲುಗಡೆ ನಿಷೇಧವಿರುವ ರಸ್ತೆಗಳ ವಿವರ:

-ಕ್ರೀನ್‌ ರಸ್ತೆ, ಬಾಳೇಕುಂದ್ರಿ ವೃತ್ತ, ಸಿ.ಟಿ.ಓ ಜಂಕ್ಷನ್‌, ಎಂ.ಜಿ ರಸ್ತೆ, ಅನಿಲ್‌ ಕುಂಬ್ಳೆ ವೃತ್ತ, ಲಿಂಕ್ ರಸ್ತೆ-ಕಬ್ಬನ್‌ರಸ್ತೆ, ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್‌ಕೋರ್ಸ್ ರಸ್ತೆ, ಸೆಂಟ್ರಲ್ ಸ್ಪೀಟ್ ರಸ್ತೆ -ಸಿಟಿಓ, ಡಿಕೆನ್ಸನ್ ರಸ್ತೆ, ಕಾಮರಾಜರಸ್ತೆ ಜಂಕ್ಷನ್‌ ನಲ್ಲಿ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.-ಸೆಂಟ್ ಮಾರ್ಕ್ಸ್ ರಸ್ತೆ, ಕ್ಯಾಶ್ ಫಾರ್ಮಸಿ ಜಂಕ್ಷನ್, ಮ್ಯೂಸಿಯಂ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಆಶೀರ್ವಾದಂ ವೃತ್ತ.

-ಕಸ್ತೂರಬಾ ರಸ್ತೆ, ಹಡ್ಲನ್ ವೃತ್ತ, ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತ, ಆರ್‌ಆ‌ರ್‌ಎಂ ವೃತ್ತ.

-ಕಬ್ಬನ್‌ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್‌ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ, ಪೌಂಟೇನ್ ರಸ್ತೆ.

-ಲ್ಯಾವೆಲ್ಲಿ ರಸ್ತೆಯಲ್ಲಿ ವಿಠಲ್‌ ಮಲ್ಯ ರಸ್ತೆ ಜಂಕ್ಷನ್‌, ಸಿದ್ದಲಿಂಗಯ್ಯ ವೃತ್ತ, ಬಿಷಪ್ ಕಾಟನ್ ಬಾಲಕಿಯರ ಶಾಲೆ

ಪಾರ್ಕಿಂಗ್ ಸ್ಥಳಗಳ ವಿವರ ಹೀಗಿದೆ:

ಗರುಡ ಮಾಲ್‌, ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್, ಸೆಂಟ್ ಜೋಸೆಫ್ ಬಾಯ್ಸ್ ಹೈ ಸ್ಕೂಲ್, ಸ್ವಾತಂತ್ರ್ಯ ಉದ್ಯಾನ (ಫ್ರೀಡಂ ಪಾರ್ಕ್). ಪಾರ್ಕಿಂಗ್ ಸ್ಥಳಗಳಿಂದ ಕ್ರೀಡಾಂಗಣಕ್ಕೆ ಬಸ್ ಸೌಲಭ್ಯವಿರುತ್ತದೆ.

ಉಚಿತ ಮೆಟ್ರೋ ಸೌಲಭ್ಯ:

ಐಪಿಎಲ್ ಪಂದ್ಯ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ಎಲ್ಲಾ ಟಿಕೆಟ್ ಹೊಂದಿದವರಿಗೆ ಉಚಿತ ಮೆಟ್ರೋ ಪ್ರಯಾಣ (ಬರುವುದು-ಹೋಗುವುದು).

ಪಿಕ್-ಅಪ್/ಡ್ರಾಪ್ ವ್ಯವಸ್ಥೆ:ಕಬ್ಬನ್ ರಸ್ತೆ, ಎಂ.ಜಿ. ರಸ್ತೆ.

ಎಐ ಕ್ಯಾಮರಾ ನಿಗಾ:

ಕ್ರೀಡಾಂಗಣದಲ್ಲಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಆಳವಡಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ ಬಳಸಿಕೊಂಡು ಪೊಲೀಸ್ ಕಮಾಂಡ್ ಮತ್ತು ನಿಯಂತ್ರಣ ಕೊಠಡಿ, ಕ್ರೀಡಾಂಗಣ ನಿಯಂತ್ರಣ ಕೊಠಡಿ ಮೂಲಕ ನಿಗಾವಣೆ